ಹುಬ್ಬಳ್ಳಿ:ಪರಿಸರ ಸ್ನೇಹಿ ರೈಲ್ವೆಯಾಗುವ ನಿಟ್ಟಿನಲ್ಲಿ ಭಾರತೀಯ ನೈರುತ್ಯ ರೈಲ್ವೆಯಿಂದ ಡೀಸೆಲ್ ಇಂಜಿನ್ಗಳನ್ನು ಎಲೆಕ್ಟ್ರಿಕ್ ಇಂಜಿನ್ಗಳಾಗಿ ಬದಲಾಯಿಸಲಾಗಿದ್ದು, ಮಾರ್ಚ್ 28ರಿಂದ ನಾಲ್ಕು ಎಲೆಕ್ಟ್ರಿಕ್ ಇಂಜಿನ್ ರೈಲುಗಳು ಸಂಚಾರ ಪ್ರಾರಂಭಿಸಿವೆ.
ಮಾರ್ಚ್ 28 ರಿಂದ ತಿರುಪತಿಯಿಂದ ಸೇವೆ ಪ್ರಾರಂಭ ವಾಗುವಂತೆ ಹಾಗೂ 29 ರಿಂದ ಛತ್ರಪತಿ ಶಾಹು ಮಹಾರಾಜ್ ಟರ್ಮಿನಸ್ ಕೊಲ್ಹಾಪುರದಿಂದ ಸೇವೆ ಪ್ರಾರಂಭವಾಗುವಂತೆ ರೈಲು ಸಂಖ್ಯೆ 17415/17416 ತಿರುಪತಿ - ಛತ್ರಪತಿ ಶಾಹು ಮಹಾರಾಜ್ ಟರ್ಮಿನಸ್ ಕೊಲ್ಹಾಪುರ - ತಿರುಪತಿ ನಿತ್ಯ ಸೇವೆಯ ಹರಿಪ್ರಿಯ ಎಕ್ಸ್ಪ್ರೆಸ್ ಅನ್ನು ಗುಂತಕಲ್ - ಎಸ್ಎಸ್ಎಸ್ ಹುಬ್ಬಳ್ಳಿ – ಗುಂತಕಲ್ಗಳ ನಡುವೆ ಎಲೆಕ್ಟ್ರಿಕ್ ಲೋಕೋಮೋಟಿವ್ನಿಂದ ಸಂಚಾರ ಪ್ರಾರಂಭಿಸಿದೆ.
ಈ ಮೊದಲು, ಈ ರೈಲು ಪ್ರಾರಂಭದಿಂದ ಕೊನೆಯ ನಿಲ್ದಾಣದವರೆಗೆ ಅಂದರೆ ತಿರುಪತಿಯಿಂದ ಛತ್ರಪತಿ ಶಾಹು ಮಹಾರಾಜ್ ಟರ್ಮಿನಸ್ ಕೊಲ್ಹಾಪುರದವರೆಗೆ ಡೀಸೆಲ್ ಲೋಕೋಮೋಟಿವ್ನೊಂದಿಗೆ ಸಂಚರಿಸುತ್ತಿತ್ತು.
ಮಾರ್ಚ್ 30ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಸೇವೆ ಪ್ರಾರಂಭವಾಗುವಂತೆ ಹಾಗೂ 31ರಿಂದ ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಸೇವೆ ಪ್ರಾರಂಭವಾಗುವಂತೆ ರೈಲು ಸಂಖ್ಯೆ 17313/17314 ಎಸ್ಎಸ್ಎಸ್ ಹುಬ್ಬಳ್ಳಿ - ಎಂಜಿಆರ್ ಚೆನ್ನೈ ಸೆಂಟ್ರಲ್ - ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ಪ್ರೆಸ್, ಎಸ್ಎಸ್ಎಸ್ ಹುಬ್ಬಳ್ಳಿ – ಗುಂತಕಲ್ಗಳ ನಡುವೆ ಎಲೆಕ್ಟ್ರಿಕ್ ಲೋಕೋಮೋಟಿವ್ನಿಂದ ಸಂಚಾರ ಪ್ರಾರಂಭಿಸಿದೆ. ಈ ಮೊದಲು, ಈ ರೈಲು ಗುಂತಕಲ್ ಮತ್ತು ಎಂಜಿಆರ್ ಚೆನ್ನೈ ಸೆಂಟ್ರಲ್ಗಳ ನಡುವೆ ಎಲೆಕ್ಟ್ರಿಕ್ ಲೋಕೋಮೋಟಿವ್ನೊಂದಿಗೆ ಸಂಚರಿಸುತ್ತಿತ್ತು.