ಹುಬ್ಬಳ್ಳಿ:ಧಾರವಾಡ ಜಿಲ್ಲೆಯಲ್ಲಿ ಬೇಸಿಗೆಯಲ್ಲೂ ವರುಣ ಅಬ್ಬರಿಸಿದ್ದಾನೆ. ಭಾನುವಾರ ಸಿಡಿಲು ಬಡಿದು 14 ಕುರಿಗಳು ಮತ್ತು ಒಂದು ಕುದುರೆ ಸಾವನ್ನಪ್ಪಿದ ಘಟನೆ ಕುಂದಗೋಳ ತಾಲೂಕಿನ ಸಿದ್ಯಾವನೂರು ಗ್ರಾಮದಲ್ಲಿ ನಡೆದಿದೆ. ಗುಡುಗು ಸಹಿತ ಭಾರಿ ಮಳೆ ಹಿನ್ನೆಲೆ ಮರದ ಬಳಿ ನಿಂತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗ್ತಿದೆ.
ಹುಬ್ಬಳ್ಳಿ: ಸಿಡಿಲು ಬಡಿದು 14 ಕುರಿ, ಒಂದು ಕುದುರೆ ಸಾವು - ಹುಬ್ಬಳ್ಳಿಯಲ್ಲಿ 14 ಕುರಿ ಹಾಗೂ ಒಂದು ಕುದುರೆ ಸಾವು
ಕುಂದಗೋಳ ತಾಲೂಕಿನ ಸಿದ್ಯಾವನೂರು ಗ್ರಾಮದಲ್ಲಿ ಭಾನುವಾರ ಸಂಜೆ ಸಿಡಿಲು ಬಡಿದು 14 ಕುರಿಗಳು ಮತ್ತು ಒಂದು ಕುದುರೆ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.

ಹುಬ್ಬಳ್ಳಿಯಲ್ಲಿ 14 ಕುರಿ ಹಾಗೂ ಒಂದು ಕುದುರೆ ಸಾವು
ಹುಬ್ಬಳ್ಳಿಯಲ್ಲಿ 14 ಕುರಿ ಹಾಗೂ ಒಂದು ಕುದುರೆ ಸಾವು
ಗ್ರಾಮದ ವಿಠಲ ಲಟ್ಟಣ್ಣವರ ಎಂಬುವರಿಗೆ ಸೇರಿದ ಕುರಿಗಳಾಗಿವೆ. ಇವರು ಊರೂರು ಸುತ್ತುತ್ತ ಜೀವನ ಸಾಗಿಸುವ ಸಂಚಾರಿ ಕುರಿಗಾಹಿಗಳಾಗಿದ್ದು, ಈ ಆಘಾತದಿಂದ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಇದನ್ನೂ ಓದಿ:ವೈಯಕ್ತಿಕ ಕಾರಣಕ್ಕೆ ಯುವಕನ ಎದೆಗೆ ಚಾಕು ಇರಿತ: ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ
TAGGED:
Hubli latest update news