ದಾವಣಗೆರೆ: ಅಧಿಕಾರಿಗಳು ನರೇಗಾ ಕೆಲಸ ನೀಡಲು ವಿಳಂಬ ಮಾಡಿದ್ದಾರೆಂಬ ಒಂದೇ ಕಾರಣಕ್ಕೆ ಯುವಕರಿಬ್ಬರ ದಾಂಧಲೆ ನಡೆಸಿ ಗ್ರಾಮ ಪಂಚಾಯತ್ ಪಿಡಿಒ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪೀಠೋಪಕರಣ ಧ್ವಂಸ ಮಾಡಿರುವ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಚಿನ್ನಿಕಟ್ಟೆ ಗ್ರಾಮದಲ್ಲಿ ನಡೆದಿದೆ.
ನರೇಗಾ ಕೆಲಸ ವಿಳಂಬ: ಯುವಕರಿಂದ ಪಿಡಿಒ, ಸಿಬ್ಬಂದಿ ಮೇಲೆ ಹಲ್ಲೆ.. ಪೀಠೋಪಕರಣ ಧ್ವಂಸ - ದಾವಣಗೆರೆ ಸುದ್ದಿ
ನರೇಗಾ ಕೆಲಸ ನೀಡಲು ವಿಳಂಬ ಮಾಡಿದ್ದಾರೆಂದು ಆರೋಪಿಸಿ ಯುವಕರಿಬ್ಬರು ದಾಂಧಲೆ ನಡೆಸಿ ಪೀಠೋಪಕರಣ ಪುಡಿ ಪುಡಿ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ಬಿದರಹಳ್ಳಿ ಗ್ರಾಮದ ಸಿದ್ದೇಶ್ ನಾಯ್ಕ್ , ಲಕ್ಕಿನಕೊಪ್ಪದ ಗಿರೀಶ್ ನಾಯ್ಕ್ರಿಂದ ಚಿನ್ನಿಕಟ್ಟೆ ಗ್ರಾ.ಪಂಯಲ್ಲಿ ನರೇಗಾ ಕೆಲಸಕ್ಕಾಗಿ ದಾಂಧಲೆ ನಡೆದಿದೆ. ಕಚೇರಿಗೆ ಆಗಮಿಸಿ ನರೇಗಾ ಕೆಲಸ ತಮಗೆ ಬೇಕಾದ ಕಡೆ ಕೊಡಿ ಎಂದು ಪಿಡಿಓಗೆ ಹಾಗು ಪಂಚಾಯಿತಿ ಸಿಬ್ಬಂದಿಗೆ ಒತ್ತಾಯಿಸಿದರು. ಇದಕ್ಕೆ ಪಿಡಿಒ ಹಾಗೂ ಸಿಬ್ಬಂದಿ ವಿರೋಧಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿಗಳಿಬ್ಬರು ಕಚೇರಿಯಲ್ಲಿದ್ದ ಕುರ್ಚಿ, ಕಿಟಕಿಗಾಜು ಪುಡಿ ಪುಡಿ ಮಾಡಿ ಹೋಗಿದ್ದಾರೆ ಎಂದು ದೂರಲಾಗಿದೆ.
ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಪೀಠೋಕರಣ ಧ್ವಂಸ ಮಾಡಿದ್ದಾರೆ ಎಂದು ಪಿಡಿಒ ಹಾಗೂ ಸಿಬ್ಬಂದಿ ದೂರು ನೀಡಿದ್ದು, ಆರೋಪಿಗಳನ್ನು ನ್ಯಾಮತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇದರ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.