ಕರ್ನಾಟಕ

karnataka

ETV Bharat / city

ದಾವಣಗೆರೆ : ರಥಕ್ಕೆ ವಿದ್ಯುತ್ ತಂತಿ ತಗುಲಿ ಯುವಕ ಸಾವು, ಹಲವರಿಗೆ ಗಾಯ - The death of a young man with an electric wire to the chariot, many injured

ಕೆಂಗಾಪುರ ಗ್ರಾಮದಲ್ಲಿ ಪ್ರತಿ ವರ್ಷ ದುರ್ಗಮ್ಮ ದೇವಿ ಜಾತ್ರೆ ನಡೆಯುತಿದ್ದು, ಈ ಬಾರಿ ಉಂಟಾದ ಅವಘಡದಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಇನ್ನು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..

youth-dies-after-electrocution-wires-to-durgamma-devis-chariot-in-davanagere
ದಾವಣಗೆರೆ : ರಥಕ್ಕೆ ವಿದ್ಯುತ್ ತಂತಿ ತಗಲಿ ಯುವಕ ಸಾವು, ಹಲವರಿಗೆ ಗಾಯ

By

Published : Apr 13, 2022, 2:11 PM IST

ದಾವಣಗೆರೆ: ಜಾತ್ರೆಯ ತೇರು ಎಳೆಯುವ ಸಂದರ್ಭ ತೇರಿಗೆ ವಿದ್ಯುತ್ ತಂತಿ ತಗುಲಿ ಓರ್ವ ಸಾವನಪ್ಪಿದ್ದು,15ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆಂಗಾಪುರ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಅರ್ಜುನ್ (20) ಎಂದು ಗುರುತಿಸಲಾಗಿದೆ.

ಇಂದು ಬೆಳಗ್ಗೆ ಗ್ರಾಮದ ದುರ್ಗಮ್ಮ ದೇವಿಯ ಜಾತ್ರೆಯ ಸಂದರ್ಭ ತೇರು ಎಳೆಯುವಾಗ ಈ ಅವಘಡ ಸಂಭವಿಸಿದ್ದು, ತೇರು ಎಳೆಯುತ್ತಿದ್ದವರಲ್ಲಿ ಯುವಕನೋರ್ವ ಸಾವನಪ್ಪಿದ್ದು, 15 ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಪಕ್ಕದ ಹೊನ್ನಾಳಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೆಂಗಾಪುರ ಗ್ರಾಮದಲ್ಲಿ ಪ್ರತಿ ವರ್ಷ ದುರ್ಗಮ್ಮ ದೇವಿ ಜಾತ್ರೆ ನಡೆಯುತಿದ್ದು, ಈ ಬಾರಿ ಉಂಟಾದ ಅವಘಡದಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಇನ್ನು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಓದಿ :ಈಶ್ವರಪ್ಪ ಅಷ್ಟೇ ಅಲ್ಲ, ಎಲ್ಲಾ ಪಕ್ಷದವರೂ ಅಷ್ಟೇ.. ಕಮಿಷನ್​​ ಪಡೆಯದೇ ಗುದ್ದಲಿ ಪೂಜೆ ಮಾಡಲ್ಲ- ಜಗನ್ನಾಥ ಶೇಗಜಿ

For All Latest Updates

TAGGED:

ABOUT THE AUTHOR

...view details