ದಾವಣಗೆರೆ: ರಕ್ತದ ಮಡುವಿನಲ್ಲಿ ಯುವಕನ ಶವ ಪತ್ತೆಯಾಗಿದ್ದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ನಗರದ ಮಹಾತ್ಮಾ ಗಾಂಧಿ ಕಾಂಪ್ಲೆಕ್ಸ್‌ನ ಮಳಿಗೆ ಎದುರಿನ ಓಸಿಯನ್ ಕಮ್ಯೂನಿಕೇಷನ್ ಅಂಗಡಿ ಬಾಗಿಲ ಬಳಿ ಮೃತದೇಹ ಪತ್ತೆಯಾಗಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗಂಗನರಸಿ ಗ್ರಾಮದ ಹೆಚ್. ಗಿರೀಶ್ (25) ಕೊಲೆಯಾದ ಯುವಕ. ವ್ಯವಸಾಯ ಮಾಡಿಕೊಂಡಿದ್ದ ಗಿರೀಶ್ನ ಶವದ ಬಳಿ ಕಲ್ಲು ಬಿದ್ದಿದ್ದು, ತಲೆ ಮೇಲೆ ಕಲ್ಲು ಎತ್ತಿ ಹಾಕಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಜನ ಸಾಮಾನ್ಯರು ಹಾಗೂ ಅಂಗಡಿ ಮಾಲೀಕರು ಅಂಗಡಿ ಬಳಿ ತೆರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ.