ದಾವಣಗೆರೆ: ರಸ್ತೆಯಲ್ಲಿ ತೆರಳುತ್ತಿದ್ದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. ಈ ಘಟನೆ ದಾವಣಗೆರೆಯ ಶಾಮನೂರು ಬಳಿ ನಡೆದಿದೆ.
ಯುವತಿಯೊಂದಿಗೆ ಅಸಭ್ಯ ವರ್ತನೆ: ಯುವಕನಿಗೆ ಬಿತ್ತು ಧರ್ಮದೇಟು - davangere latest news
ದಾವಣಗೆರೆಯ ಶಾಮನೂರು ಬಳಿ ವಾಕಿಂಗ್ ಮಾಡುತ್ತಿದ್ದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಸಾರ್ವಜನಿಕರು ಥಳಿಸಿದ್ದಾರೆ.
ಯುವಕನಿಗೆ ಧರ್ಮದೇಟು ಕೊಟ್ಟ ಸಾರ್ವಜನಿಕರು
ಹೊಸಕುಂದುವಾದ ಗ್ರಾಮದ ಅಂಜಿನಿ ಎಂಬಾತ ಸಂಜೆ ಶಾಮನೂರು ರಸ್ತೆಯಲ್ಲಿ ಯುವತಿ ವಾಕಿಂಗ್ ಮಾಡುತ್ತಿರುವಾಗ ಅಸಭ್ಯವಾಗಿ ವರ್ತಿಸಿದ್ದ. ಇದನ್ನು ನೋಡಿದ ಸ್ಥಳೀಯರು ಯುವಕನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಯುವಕ ಕೂಲಿ ಕೆಲಸ ಮಾಡಿಕೊಂಡಿದ್ದು, ಮದ್ಯ ವ್ಯಸನಿಯಾಗಿದ್ದಾನೆ. ಸದ್ಯ ವಿದ್ಯಾನಗರ ಪೊಲೀಸರ ವಶದಲ್ಲಿದ್ದಾನೆ.