ಕರ್ನಾಟಕ

karnataka

ETV Bharat / city

ದಾವಣಗೆರೆ: ರೀಲ್‌ ಅಲ್ಲ, ರಿಯಲ್‌ ಲಕ್ಷ್ಮಿಯನ್ನೇ ಪ್ರತಿಷ್ಠಾಪಿಸಿ ಪೂಜೆ - ದಾವಣಗೆರೆ

ದೀಪಾವಳಿ ಹಬ್ಬದಂದು ಎಲ್ಲರ ಮನ-ಮನೆಗಳಿಗೂ ಲಕ್ಷ್ಮಿ ಆಶೀರ್ವಾದ ಇರಲಿ‌, ಸಕಲ ಸಂಪತ್ತು ಕರುಣಿಸಲಿ ಎಂದು ಧನ ಲಕ್ಷ್ಮೀಯನ್ನು ಕೂರಿಸಿ ಸಡಗರ, ಸಂಭ್ರಮದಿಂದ ಪೂಜೆ ಮಾಡಲಾಗುತ್ತದೆ. ಆದ್ರೆ ಬೆಣ್ಣೆನಗರಿ ದಾವಣಗೆರೆಯಲ್ಲಿ ಮೇಕಪ್ ಆರ್ಟಿಸ್ಟ್ ಒಬ್ಬರು ರಿಯಲ್ ಲಕ್ಷ್ಮೀಯನ್ನೇ ಕೂರಿಸಿ ಪೂಜೆ ಮಾಡಿದ್ದಾರೆ. ಈ ರಿಯಲ್ ಲಕ್ಷ್ಮಿ ಜನರ ಗಮನ ಸೆಳೆಯುತ್ತಿದ್ದಾಳೆ.

Make-up worship for the girl in the manner of Goddess Lakshmi in Davanagere
ದಾವಣಗೆರೆ: ರೀಲ್‌ ಅಲ್ಲ... ರಿಯಲ್‌ ಲಕ್ಷ್ಮಿಯನ್ನೇ ಪ್ರತಿಷ್ಠಾಪಿಸಿ ಪೂಜೆ..!

By

Published : Nov 5, 2021, 8:08 PM IST

ದಾವಣಗೆರೆ: ಮನದುಗುಡ ಮರೆತು, ಪ್ರೀತಿ ಹೊತ್ತು ತುಂಬಿ ಕಷ್ಟದ ಕತ್ತಲಿಗೆ ನಂಬಿಕೆ ದೀಪ ಉರಿಸಿ, ಜೀವನ ಜ್ಯೋತಿ ಹರಿಸೋ ಹಬ್ಬ ದೀಪಾವಳಿ.

ಈ ಬೆಳಕಿನ ಹಬ್ಬದ ಅಂಗವಾಗಿ ಪ್ರತಿಯೊಬ್ಬರ ಮನೆಗಳಲ್ಲೂ ಧನಲಕ್ಷ್ಮಿಯನ್ನು ಕೂರಿಸಿ ವಿಶೇಷ ಅಲಂಕಾರ ಮಾಡಲಾಗುತ್ತದೆ. ದಾವಣಗೆರೆಯಲ್ಲಿ ಮೇಕಪ್ ಆರ್ಟಿಸ್ಟ್ ಒಬ್ಬರು ಬಾಲಕಿಯೊಬ್ಬಳಿಗೆ ಲಕ್ಷ್ಮಿಯಂತೆ ಮೇಕಪ್ ಮಾಡಿ, ಆಕೆಯನ್ನೇ ಕೂರಿಸಿ ಪೂಜೆ ಮಾಡಿದ್ದಾರೆ.


ವಿನೋಭನಗರದ ಮೇಕಪ್ ಆರ್ಟಿಸ್ಟ್ ರೂಪಾ ಸುರೇಶ್, ಎಸ್ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿರುವ ಸಿಂಚನಾ ಎಂಬ ಬಾಲಕಿಗೆ ಲಕ್ಷ್ಮಿ ರೂಪದಲ್ಲಿ ಆಕರ್ಷಕ ಅಲಂಕಾರ ಮಾಡಿದ್ದಾರೆ. ದೀಪಾವಳಿಯಲ್ಲಿ ಸಂಭ್ರಮದಲ್ಲಿ ಲಕ್ಷ್ಮಿ ಜನರನ್ನು ಆಕರ್ಷಿಸುತ್ತಿದ್ದಾಳೆ.

ನವರಾತ್ರಿಯಲ್ಲಿ ಕಾಳಿ ಅವತಾರ, ದುರ್ಗಿ, ಸರಸ್ವತಿ ಅಲಂಕಾರ ಮಾಡುವ ರೂಪಾ ಸುರೇಶ್‌, ಇದೀಗ ಬಾಲಕಿಗೆ ಲಕ್ಷ್ಮೀ ರೂಪ ನೀಡಿ ಎಲ್ಲರಲ್ಲೂ ಭಕ್ತಿ ಭಾವ ಮೂಡಿಸಿದ್ದಾರೆ.

ABOUT THE AUTHOR

...view details