ದಾವಣಗೆರೆ: ಕೋವಿಡ್ ಹಾಗೂ ಒಮಿಕ್ರಾನ್ ಹಿನ್ನೆಲೆ ರಾಜ್ಯಾದ್ಯಂತ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲು ಅವಕಾಶವಿಲ್ಲ ಎನ್ನುವ ಅದೇಶವಿದ್ದರೂ ಕೂಡ ದಾವಣಗೆರೆಯ ಶಾಮನೂರು ಆಂಜನೇಯ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳು ತೆರೆದಿವೆ. ಜನರು ಕೂಡ ದೇವರ ದರ್ಶನಕ್ಕೆ ಆಗಮಿಸುತ್ತಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶ ಕೇವಲ ದಾಖಲೆಗಳಿಗೆ ಮಾತ್ರ ಸೀಮಿತವಾಗಿದೆ. ಯಾವುದೇ ಆದೇಶ ಪಾಲನೆಯಾಗುತ್ತಿಲ್ಲ ಎನ್ನಲಾಗುತ್ತಿದೆ. ಕೆಲ ದೇವಸ್ಥಾನಗಳಿಗೆ ಪಾಲಿಕೆಯವರು ಬಂದು ಬಾಗಿಲು ಹಾಕಿಸಿದರೆ ಕೆಲ ದೇವಸ್ಥಾನಗಳು ಹಾಗೆಯೇ ದೇವರ ದರ್ಶನಕ್ಕೆ ಭಕ್ತರಿಗೆ ಅನುವು ಮಾಡಿಕೊಡಿಕೊಟ್ಟಿದ್ದಾರೆ.