ದಾವಣಗೆರೆ: ಜಿಲ್ಲೆಯ ಲೆನಿನ್ ನಗರದ ಮಹಾನಗರ ಪಾಲಿಕೆ ಸದಸ್ಯೆಯೊಬ್ಬರ ಜನಸಂಪರ್ಕ ಕಚೇರಿ ಒಳಗಡೆ ನಿಲ್ಲಿಸಿದ್ದ ಕಾರಿನಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿದ್ದು, ಶುಕ್ರವಾರ ಕೆ.ಟಿ.ಜೆ ನಗರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕಾರು ರೌಡಿಶೀಟರ್ ಸಂತೋಷ್‌ಕುಮಾರ್ ಅಲಿಯಾಸ್ ಕಣ್ವಾಗೆ ಸೇರಿದ್ದಾಗಿದೆ.
ಪಾಲಿಕೆಯ 36ನೇ ವಾರ್ಡ್ ಸದಸ್ಯೆ ನಾಗರತ್ನಮ್ಮ ಅವರ ಜನಸಂಪರ್ಕ ಕಚೇರಿ ಬಳಿ ನಿಲ್ಲಿಸಿದ್ದ ರೌಡಿಶೀಟರ್ ಸಂತೋಷ್‌ಕುಮಾರ್ ಹಾಗೂ ಆತನ ಸಹಚರರಿಗೆ ಸೇರಿದ ನಂಬರ್ ಪ್ಲೇಟ್ ಇಲ್ಲದ ಎಕ್ಸ್‌ಯುವಿ ಕಾರಿನೊಳಗಡೆ ಇದ್ದ 4 ಲಾಂಗ್ ಹಾಗೂ 50 ಗ್ರಾಂ ಖಾರದಪುಡಿಯನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.