ದಾವಣಗೆರೆ :ದಾವಣಗೆರೆ ಸೇರಿದಂತೆ ಯಾದಗಿರಿ, ಕೊಪ್ಪಳ, ಚಿತ್ರದುರ್ಗ, ಯಾದಗಿರಿ ಹೀಗೆ ರಾಜ್ಯಾದ್ಯಂತಲ ಹಲವು ಜನ ವಿದ್ಯಾರ್ಥಿಗಳು ಪಿಯುಸಿ, ಎಸ್ಎಸ್ಎಲ್ಸಿಯಲ್ಲಿ ಕಷ್ಟಪಟ್ಟು ಪರೀಕ್ಷೆ ಬರೆದು ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ 2020ರಲ್ಲಿ ಪರೀಕ್ಷೆ ಬರೆದಿದ್ದರು. ಸಾಕಷ್ಟು ವಿದ್ಯಾರ್ಥಿಗಳಿಗೆ ನಿರಾಶೆ ಮೂಡಿದೆ. ಗ್ರಾಮ ಲೆಕ್ಕಿಗರ ಹುದ್ದೆಗೆ ಕೇವಲ ಕೋವಿಡ್ ಸಂದರ್ಭದಲ್ಲಿ ಅನುಕಂಪದಲ್ಲಿ ಪಾಸಾದ ವಿದ್ಯಾರ್ಥಿಗಳನ್ನು ಮಾತ್ರ ತೆಗೆದು ಕೊಳ್ಳಲಾಗಿದೆ ಎಂದು 2020ರ ಪರೀಕ್ಷೆ ಬರದ ಅಭ್ಯರ್ಥಿಗಳು ದೂರಿದ್ದಾರೆ.
ಎಲ್ಲಾ ಹುದ್ದೆ ಆಕಾಂಕ್ಷಿಗಳು ಒಂದಾಗಿ ದಾವಣಗೆರೆ ಆಗಮಿಸಿ ಕಂದಾಯ ಸಚಿವ ಆರ್. ಅಶೋಕ್ ಅವರಗೆ ಘೇರಾವ್ ಹಾಕಲು ಯತ್ನಿಸಿದರು. ಆದರೆ, ಪೊಲೀಸರು ಅಡ್ಡಿಪಡಿಸಿದರು. 2020ರಲ್ಲಿ ರಾಜ್ಯಕ್ಕೆ ಪಿಯು ಪರೀಕ್ಷೆಯಲ್ಲಿ ರ‍್ಯಾಂಕ್ಪಡೆದಿದ್ದವರನ್ನು ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಸರ್ಕಾರ ಆಯ್ಕೆ ಮಾಡದೇ, ಕೋವಿಡ್ ಸಂದರ್ಭದಲ್ಲಿ ಪಾಸಾದವರನ್ನು ಆಯ್ಕೆ ಮಾಡಲಾಗಿದೆ. 2,200 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಎಲ್ಲರೂ ಕೋವಿಡ್ ಸಂದರ್ಭದಲ್ಲಿ ಪಾಸದವರೇ ಇದ್ದಾರೆ ಎಂಬುದು ಅಭ್ಯರ್ಥಿಗಳ ದೂರು.