ಕರ್ನಾಟಕ

karnataka

ETV Bharat / city

ದಾವಣಗೆರೆ : ವಿದ್ಯಾರ್ಥಿಗಳಿಗಾಗಿ ವಿದ್ವತ್ ಲರ್ನಿಂಗ್​​ ಆ್ಯಪ್ ಬಿಡುಗಡೆ - ದಾವಣಗೆರೆ ಸ್ಮಾರ್ಟ್ ಸಿಟಿ ವತಿಯಿಂದ ವಿದ್ಯಾರ್ಥಿಗಳಿಗಾಗಿ ಆ್ಯಪ್

ಮೈಸೂರಿನ ವಿದ್ವತ್‌ ಇನೋವೇಟಿವ್ ಪ್ರೈ.ಲಿ. ಸಹಯೋಗದಲ್ಲಿ ದಾವಣಗೆರೆ ಜಿಲ್ಲೆಯ 8ರಿಂದ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ವಿದ್ವತ್‌ ಲರ್ನಿಂಗ್‌ ಆ್ಯಪ್​​ ಅನ್ನು ಉಚಿತವಾಗಿ ನೀಡಲು ನಿರ್ಧರಿಸಿ, ಬಿಡುಗಡೆ ಮಾಡಿದೆ. ಇದರಿಂದ ಸಾವಿರಾರು ಬಡ ಹಾಗೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕ್ಯು ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ..

App for Students from Davanagere Smart City
ವಿದ್ಯಾರ್ಥಿಗಳಿಗಾಗಿ ವಿದ್ವತ್ ಲರ್ನಿಂಗ್​​ ಆ್ಯಪ್ ಬಿಡುಗಡೆ

By

Published : Feb 4, 2022, 4:54 PM IST

Updated : Feb 4, 2022, 5:16 PM IST

ದಾವಣಗೆರೆ: ಹೈಸ್ಕೂಲ್‌ ಮಕ್ಕಳಿಗೆ ವ್ಯಾಸಂಗ ಮಾಡಲು ಹಣ ಸಹಿತ ಸಾಕಷ್ಟು ಆ್ಯಪ್​ಗಳು ಖಾಸಗಿಯಾಗಿ ಲಭ್ಯ ಇವೆ. ಆದ್ರೆ, ದಾವಣಗೆರೆ ಜಿಲ್ಲೆಯ ಸ್ಮಾರ್ಟ್ ಸಿಟಿ ಅಧಿಕಾರಿಗಳು ಮಕ್ಕಳಿಗೆ ಉಪಯೋಗ ಆಗಲೆಂದು ಎಜುಕೇಷನ್‌ ಶುಲ್ಕ ರಹಿತ ಆ್ಯಪ್‌ವೊಂದನ್ನು ಬಿಡುಗಡೆ ಮಾಡಿದೆ. 8 ರಿಂದ 10ನೇ ತರಗತಿ ಮಕ್ಕಳಿಗೆ ಆ್ಯಪ್​ಗಳ ಅವಶ್ಯಕತೆ ಇದ್ದು, ಪರೀಕ್ಷೆಗಾಗಿ ಓದಲು ಸಹಾಯಕವಾಗಲಿದೆ.

ಹತ್ತನೇ ತರಗತಿಯ ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಲೆಂದು ಪೋಷಕರು ವಿವಿಧ ಖಾಸಗಿ ಆ್ಯಪ್‌ ಹಾಗೂ ಟ್ಯೂಷನ್‌ಗಳ ಮೊರೆ ಹೋಗ್ತಾರೆ. ಅದನ್ನು ತಪ್ಪಿಸಲು ಹಾಗೂ ಬಡ ಮಕ್ಕಳ ಅನುಕೂಲಕ್ಕಾಗಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ವಿದ್ವತ್ ಲರ್ನಿಂಗ್​​ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದಾರೆ.

ವಿದ್ಯಾರ್ಥಿಗಳಿಗಾಗಿ ವಿದ್ವತ್ ಲರ್ನಿಂಗ್​​ ಆ್ಯಪ್ ಬಿಡುಗಡೆ

ನಿಗದಿತ ಶುಲ್ಕ ಪಾವತಿಸಿ ಖಾಸಗಿ ಎಜುಕೇಷನ್ ಆ್ಯಪ್​ಗಳನ್ನು ಬಳಸುವ ಬದಲು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಪಠ್ಯದ ವಿಷಯ ತಿಳಿಯಲು ಈ ವಿದ್ವತ್ ಆ್ಯಪ್ ಸಹಕಾರಿಯಾಗಲಿದೆ. ದುಬಾರಿ ಪ್ರಪಂಚದಲ್ಲಿ 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಇಂತಹ ಆ್ಯಪ್‌ಗಳನ್ನು ಉಚಿತವಾಗಿ ನೀಡಿದ್ರೆ ಹೇಗೆ ಎಂದು ಮನಗಂಡ ದಾವಣಗೆರೆ ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಇದಕ್ಕೊಂದು ವ್ಯವಸ್ಥೆ ಕಲ್ಪಿಸಿದ್ದಾರೆ.

ಮೈಸೂರಿನ ವಿದ್ವತ್‌ ಇನೋವೇಟಿವ್ ಪ್ರೈ.ಲಿ. ಸಹಯೋಗದಲ್ಲಿ ದಾವಣಗೆರೆ ಜಿಲ್ಲೆಯ 8ರಿಂದ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ವಿದ್ವತ್‌ ಲರ್ನಿಂಗ್‌ ಆ್ಯಪ್​​ ಅನ್ನು ಉಚಿತವಾಗಿ ನೀಡಲು ನಿರ್ಧರಿಸಿ, ಬಿಡುಗಡೆ ಮಾಡಿದೆ. ಇದರಿಂದ ಸಾವಿರಾರು ಬಡ ಹಾಗೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕ್ಯು ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ:ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ನಮ್ಮದು.. ನಮ್ಮಲ್ಲಿ ಅನೇಕ ಜಾತಿ, ಧರ್ಮ, ಸಂಪ್ರದಾಯ ಪಾಲಿಸಲಾಗುತ್ತಿದೆ.. ಸಚಿವೆ ಜೊಲ್ಲೆ

ಈ ವಿದ್ವತ್ ಆ್ಯಪ್​ನಲ್ಲಿ 8-10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್‌ ಹಾಗೂ ಉರ್ದು ಸಿಲಬಸ್‌ ಜೊತೆಗೆ ಸಿಬಿಎಸ್‌ಇ ಸಿಲಬಸ್‌ನ ಪಠ್ಯಕ್ರಮಗಳಿವೆ. ಅವರವರ ಅನುಕೂಲಕ್ಕೆ ತಕ್ಕಂತೆ ಇದನ್ನು ಬಳಸಬಹುದು. ಪಠ್ಯಗಳು ಪಿಡಿಎಫ್‌ ಮಾದರಿಯಲ್ಲಿವೆ.

ನವೀನ ಮಾದರಿ ಪ್ರಶ್ನೋತ್ತರ, ಮಾಡೆಲ್ ಪ್ರಶ್ನೆ ಪತ್ರಿಕೆ, ರೇಖಾ ಚಿತ್ರ ಹಾಗೂ ಆನಿಮೇಷನ್ ಮೂಲಕ‌ ಕಲಿಕೆಗೆ ಅವಕಾಶ ಕಲ್ಪಿಸಿದ್ದಾರೆ. ಎಲ್ಲವೂ ಉಚಿತವಾಗಿ ದೊರೆಯುತ್ತಿದೆ ಎಂಬುದೇ ದೊಡ್ಡ ಪ್ಲಸ್‌ ಪಾಯಿಂಟ್‌. ಈ ಆ್ಯಪ್‌ ಬಳಸಿದ ಬಹುತೇಕ ವಿದ್ಯಾರ್ಥಿಗಳು ಶೇ. 80ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ ಎಂಬುದು ಆ್ಯಪ್‌ ಸಿದ್ಧಪಡಿಸಿದ ಕಂಪನಿ ವ್ಯವಸ್ಥಾಪಕ ನಿರ್ದೇಶಕರ ಮಾತು.

Last Updated : Feb 4, 2022, 5:16 PM IST

ABOUT THE AUTHOR

...view details