ದಾವಣಗೆರೆ: ಸಾವಿನಲ್ಲೂ ದಂಪತಿಗಳಿಬ್ಬರು ಒಂದಾಗಿರುವ ಘಟನೆಗೆ ದಾವಣಗೆರೆ ಜಿಲ್ಲೆ ಸಾಕ್ಷಿಯಾಗಿದ್ದು, ಒಂದೇ ದಿನ ಅಂತರದಲ್ಲಿ ಗಂಡ-ಹೆಂಡತಿ ಮಹಾಮಾರಿ ಕೊರೊನಾಕ್ಕೆ ಬಲಿಯಾಗಿದ್ದಾರೆ.
ಕೋವಿಡ್ ಅಟ್ಟಹಾಸ: ಸಾವಿನಲ್ಲೂ ಒಂದಾದ ದಂಪತಿ - ತ್ಯಾವಣಿಗಿ ದಂಪತಿ ಸಾವು
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತ್ಯಾವಣಿಗಿ ಗ್ರಾಮದ ಹನುಮಮ್ಮ ಹಾಗೂ ಅಜ್ಜಪ್ಪ ಸೋಂಕಿಗೆ ಬಲಿಯಾದ ದಂಪತಿ. ಕಳೆದ ಕೆಲ ದಿನಗಳ ಹಿಂದೆ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಇಬ್ಬರೂ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಪತ್ನಿ ಹನುಮಮ್ಮ ಸಾವನ್ನಪ್ಪಿದ್ದು, ಬುಧವಾರ ಪತಿ ಅಜ್ಜಪ್ಪ ಕೂಡ ಸೋಂಕಿಗೆ ಬಲಿಯಾಗಿದ್ದಾರೆ.
ದಂಪತಿ ಸಾವು
ಜಿಲ್ಲೆಯ ಚನ್ನಗಿರಿ ತಾಲೂಕಿನ ತ್ಯಾವಣಿಗಿ ಗ್ರಾಮದ ಹನುಮಮ್ಮ (46) ಹಾಗೂ ಅಜ್ಜಪ್ಪ (54) ಸೋಂಕಿಗೆ ಬಲಿಯಾದ ದಂಪತಿಗಳು. ಕಳೆದ ಕೆಲ ದಿನಗಳ ಹಿಂದೆ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಇಬ್ಬರೂ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಪತ್ನಿ ಹನುಮಮ್ಮ ಸಾವನ್ನಪ್ಪಿದ್ದು, ಬುಧವಾರ ಪತಿ ಅಜ್ಜಪ್ಪ ಕೂಡ ಸೋಂಕಿಗೆ ಬಲಿಯಾಗಿದ್ದಾರೆ.
ಅಜ್ಜಪ್ಪ ಚಿಕ್ಕಗಂಗೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದರು. ದಂಪತಿ ಸಾವಿಗೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.