ಕರ್ನಾಟಕ

karnataka

ETV Bharat / city

ಉಕ್ರೇನ್‌ನಿಂದ ದೆಹಲಿಗೆ ಬಂದಿಳಿದ ದಾವಣಗೆರೆಯ ಇಬ್ಬರು ವಿದ್ಯಾರ್ಥಿಗಳು - ಉಕ್ರೇನ್ ನಿಂದ ದೆಹಲಿಗೆ ಬಂದಿಳಿದ ದಾವಣಗೆರೆಯ ಇಬ್ಬರು ವಿದ್ಯಾರ್ಥಿಗಳು

ಇಬ್ಬರು ವಿದ್ಯಾರ್ಥಿಗಳು ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ದಾವಣಗೆರೆಗೆ ಬರುವ ಸಾಧ್ಯತೆ ಇದೆ. ಮೆಡಿಕಲ್ ವಿದ್ಯಾರ್ಥಿಗಳಾದ ಸೈಯದ‌್ ಹಬೀಬಾ ಹಾಗೂ ಪ್ರಿಯಾ ಇಬ್ಬರ ಪೋಷಕರು ಕೇಂದ್ರ ಸರ್ಕಾರಕ್ಕೆ ಅಭಿನಂದನೆ‌ ಸಲ್ಲಿಸಿದ್ದು, ಅವರ ಕುಟುಂಬದ ಸಂತೋಷಕ್ಕೆ ಪಾರವೆ ಇಲ್ಲದಂತಾಗಿದೆ..

two students from davangere returned from ukrein
ಉಕ್ರೇನ್ ನಿಂದ ದೆಹಲಿಗೆ ಬಂದಿಳಿದ ದಾವಣಗೆರೆಯ ಇಬ್ಬರು ವಿದ್ಯಾರ್ಥಿಗಳು

By

Published : Feb 27, 2022, 4:28 PM IST

ದಾವಣಗೆರೆ :ಉಕ್ರೇನ್‌ನಲ್ಲಿ ಸಿಲುಕಿದ್ದ ದಾವಣಗೆರೆಯ ಇಬ್ಬರು ವಿದ್ಯಾರ್ಥಿನಿಯರು ಸುರಕ್ಷಿತವಾಗಿ ದೆಹಲಿಗೆ ಬಂದಿಳಿದಿದ್ದಾರೆ. ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದ ಪ್ರಿಯಾ ಮತ್ತು ದಾವಣಗೆರೆ ನಗರದ ಸೈಯದಾ ಹಬೀಬಾ ತವರಿಗೆ ಮರಳಿದ ವಿದ್ಯಾರ್ಥಿನಿಯರಾಗಿದ್ದಾರೆ.

ಭಾರತದ ವಿಮಾನದ ಮೂಲಕ ಮೊದಲ ಏರ್‌ಲಿಫ್ಟ್‌ನಲ್ಲಿ ದಾವಣಗೆರೆಯ ಇಬ್ಬರು ವಿಧ್ಯಾರ್ಥಿಗಳು ಇಂದು ಬೆಳಗಿನ ಜಾವ 2:45ಕ್ಕೆ ಆಗಮಿಸಿದ್ದರು. ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿ ಬಳಿಕ ಅಲ್ಲಿಂದ ದಾವಣಗೆರೆಗೆ ಇಬ್ಬರು ವಿದ್ಯಾರ್ಥಿಗಳು ಆಗಮಿಸಲಿದ್ದಾರೆ.

ಇನ್ನು ಇಬ್ಬರು ವಿದ್ಯಾರ್ಥಿಗಳು ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ದಾವಣಗೆರೆಗೆ ಬರುವ ಸಾಧ್ಯತೆ ಇದೆ. ಮೆಡಿಕಲ್ ವಿದ್ಯಾರ್ಥಿಗಳಾದ ಸೈಯದ‌್ ಹಬೀಬಾ ಹಾಗೂ ಪ್ರಿಯಾ ಇಬ್ಬರ ಪೋಷಕರು ಕೇಂದ್ರ ಸರ್ಕಾರಕ್ಕೆ ಅಭಿನಂದನೆ‌ ಸಲ್ಲಿಸಿದ್ದು, ಅವರ ಕುಟುಂಬದ ಸಂತೋಷಕ್ಕೆ ಪಾರವೆ ಇಲ್ಲದಂತಾಗಿದೆ.

ಓದಿ :ಜಮ್ಮು-ಕಾಶ್ಮೀರ್ ವಿರುದ್ಧ ಕರ್ನಾಟಕಕ್ಕೆ 117 ರನ್​ಗಳ ಭರ್ಜರಿ ಗೆಲುವು

ABOUT THE AUTHOR

...view details