ಕರ್ನಾಟಕ

karnataka

ETV Bharat / city

ವಾಲ್ಮೀಕಿ ಜಾತ್ರೆಗೆ ಸಿಎಂ ಭೇಟಿ, ಹಿಂದೆ ನಡೆದ ಅಚಾತುರ್ಯ ಮತ್ತೆ ನಡೆಯುವುದಿಲ್ಲ: ರೇಣುಕಾಚಾರ್ಯ - ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ನ್ಯೂಸ್​

ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆಗೆ ನಾಳೆ ಸಿಎಂ ಯಡಿಯೂರಪ್ಪ ಆಗಮಿಸುವುದು ಬಹುತೇಕ ಖಚಿತ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.

tomorrow CM Yediyurappa visit Valmiki Fair at davangere
ವಾಲ್ಮೀಕಿ ಜಾತ್ರೆ ಕುರಿತು ಮಾತನಾಡಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ

By

Published : Feb 8, 2020, 8:23 PM IST

ದಾವಣಗೆರೆ: ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆಗೆ ನಾಳೆ ಸಿಎಂ ಯಡಿಯೂರಪ್ಪ ಆಗಮಿಸುವುದು ಬಹುತೇಕ ಖಚಿತ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ತಿಳಿಸಿದರು.

ವಾಲ್ಮೀಕಿ ಜಾತ್ರೆ ಕುರಿತು ಮಾತನಾಡಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ

ವಾಲ್ಮೀಕಿ ಸಮುದಾಯಕ್ಕೆ ಶೇಕಡಾ 7.5 ರಷ್ಟು ಮೀಸಲಾತಿ ನೀಡಬೇಕೆಂಬುದು ಶ್ರೀಗಳ ಬಲವಾದ ಬೇಡಿಕೆ.‌ ಈ ವಿಚಾರ ಕಾರ್ಯಕ್ರಮದಲ್ಲಿ ನಾಳೆ ಮುನ್ನೆಲೆಗೆ ಬರಲಿದೆ. ಈಗಾಗಲೇ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ರಾಜ್ಯಾದಂತ ಪಾದಯಾತ್ರೆ ನಡೆಸುವ ಮೂಲಕ ಗಮನ ಸೆಳೆದಿದ್ದರು. ಇಂದು ಆರೋಗ್ಯ ಸಚಿವ ಶ್ರೀರಾಮುಲು ಸಹ ಜಾತ್ರೆಗೆ ಆಗಮಿಸಿದ್ದರು.

ಈ ಹಿಂದೆ ಹರಿಹರದ ಪಂಚಮಸಾಲಿ ಸಮಾಜದ ಪೀಠಾಧಿಪತಿ ವಚನಾನಂದ ಶ್ರೀಗಳು ವೇದಿಕೆ ಮೇಲೆಯೇ ಯಡಿಯೂರಪ್ಪನವರಿಗೆ ನೀವು ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ನೀಡದಿದ್ದರೆ ಪಂಚಮಸಾಲಿ ಸಮಾಜ ನಿಮ್ಮನ್ನು ಕೈಬಿಡುತ್ತೆ ಎಂದು ಹೇಳಿ ಇಕ್ಕಟ್ಟಿಗೆ ಸಿಲುಕಿಸಿದ್ದರು. ಇದಕ್ಕೆ ಯಡಿಯೂರಪ್ಪ ಕೆಂಡಾಮಂಡಲರಾಗಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈಗ ಮತ್ತೆ ವಾಲ್ಮೀಕಿ ಜಾತ್ರೆಗೆ ಸಿಎಂ ಆಗಮಿಸುತ್ತಿದ್ದು, ಎಚ್ಚರಿಕೆಯ ನಡೆಯನ್ನು ಯಡಿಯೂರಪ್ಪ ಇಡಲಿದ್ದಾರೆ ಎನ್ನಲಾಗುತ್ತಿದೆ.

ವಾಲ್ಮೀಕಿ ಜಾತ್ರೆ ಕುರಿತು ಮಾತನಾಡಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ, ವಾಲ್ಮೀಕಿ ಜಾತ್ರೆಯಲ್ಲಿ ಈ ಹಿಂದೆ ಆದ ಅಚಾತುರ್ಯ ನಡೆಯುವುದಿಲ್ಲ ಎಂಬ ವಿಶ್ವಾಸ ಇದೆ. ಶ್ರೀಗಳು ಅಭಿಪ್ರಾಯ ಮಂಡಿಸುವುದರಲ್ಲಿ ತಪ್ಪೇನಿಲ್ಲ. ಈಗಾಗಲೇ ವಾಲ್ಮೀಕಿ ಶ್ರೀಗಳು ಈ ಬಗ್ಗೆ ಸಿಎಂ ಜೊತೆ ಮಾತನಾಡಿದ್ದಾರೆ ಎಂದು ತಿಳಿಸಿದರು.

ABOUT THE AUTHOR

...view details