ಕರ್ನಾಟಕ

karnataka

ETV Bharat / city

ಬೆಣ್ಣೆ ನಗರಿಯಲ್ಲಿ ದರ್ಬಾರ್ ನಡೆಸುವವರು ಯಾರು...? - ಸಾಮಾನ್ಯ ವರ್ಗಕ್ಕೆ ಪಾಲಿಕೆ ಮೇಯರ್ ಸ್ಥಾನ ನಿಗದಿ

ಅತಂತ್ರವಾಗಿದ್ದ ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಅಧಿಕಾರದ ದರ್ಬಾರ್ ನಡೆಸಲು ಮೂರು ಪಕ್ಷಗಳು ತೆರೆಮರೆಯ ಕಸರತ್ತು ನಡೆಸುತ್ತಿದ್ದು, ಸಿಎಂ ನೇತೃತ್ವದಲ್ಲಿ ಮೂರು ಜನ ಪಕ್ಷೇತರ ಸದಸ್ಯರನ್ನು ಬಿಜೆಪಿಗೆ ಅಧಿಕೃತವಾಗಿ ಬರಮಾಡಿಕೊಳ್ಳಲಾಗಿದೆ.

KN_DVG_02_05_PALIKE_FIGHT_SCRIPT_7203307
ಬೆಣ್ಣೆ ನಗರಿಯಲ್ಲಿ ದರ್ಬಾರ್ ನಡೆಸುವವರು ಯಾರು...?

By

Published : Dec 5, 2019, 8:27 PM IST

ದಾವಣಗೆರೆ :ಅತಂತ್ರವಾಗಿದ್ದ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಅಧಿಕಾರದ ದರ್ಬಾರ್ ನಡೆಸಲು ಮೂರು ಪಕ್ಷಗಳು ತೆರೆಮರೆಯ ಕಸರತ್ತು ನಡೆಸುತ್ತಿದ್ದು, ಸಿಎಂ ನೇತೃತ್ವದಲ್ಲಿ ಮೂರು ಜನ ಪಕ್ಷೇತರ ಸದಸ್ಯರನ್ನು ಬಿಜೆಪಿಗೆ ಅಧಿಕೃತವಾಗಿ ಬರಮಾಡಿಕೊಂಡಿದ್ದಾರೆ.

ಬೆಣ್ಣೆ ನಗರಿಯಲ್ಲಿ ದರ್ಬಾರ್ ನಡೆಸುವವರು ಯಾರು...?

22 ಸ್ಥಾನಗಳಲ್ಲಿ ಗೆದ್ದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಏರುತ್ತೆ ಎಂದೇ ಭಾವಿಸಲಾಗಿತ್ತು. ಆದರೆ ಈಗ ಬಿಜೆಪಿ ಭಾರೀ ತಂತ್ರಗಾರಿಕೆ ನಡೆಸುತ್ತಿದ್ದು, ಕೈಗೆ ಪವರ್ ತಪ್ಪಿಸಲು ತೆರೆಮರೆಯ ಎಲ್ಲಾ ಕಸರತ್ತನ್ನ ನಡೆಸುತ್ತಿದೆ. 17 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿಗೆ ಈಗ ನಾಲ್ವರು ಬಂಡಾಯವಾಗಿ ಸ್ಪರ್ಧಿಸಿ ಗೆದ್ದಿದ್ದವರು ಬೆಂಬಲಿಸಿದ್ದಾರೆ. ಸಿಎಂ ಯಡಿಯೂರಪ್ಪ ದಾವಣಗೆರೆಗೆ ಬಂದಾಗ ಅಧಿಕೃತವಾಗಿ ಬಿಜೆಪಿ ಸೇರಿದ ಪರಿಣಾಮ ಪಾಲಿಕೆಯ ಬಲ ಕಮಲ ಪಾಳೆಯಕ್ಕೆ 21 ಕ್ಕೇರಿದೆ. ಪಕ್ಷೇತರರಾಗಿ ಕಣಕ್ಕಿಳಿದು ಜಯ ಗಳಿಸಿದ್ದ ಉದಯ್ ಕುಮಾರ್ ಕೈ ಬೆಂಬಲಿಸುತ್ತಾರೆ ಎಂದೇ ಭಾವಿಸಲಾಗಿತ್ತಾದರೂ ಇನ್ನೂ ಸ್ಪಷ್ಟವಾದ ನಿರ್ಧಾರ ತಿಳಿಸಿಲ್ಲ.

ಈಗ ಎಲ್ಲರ ಚಿತ್ತ ನೆಟ್ಟಿರುವುದು ಜೆಡಿಎಸ್ ಅಭ್ಯರ್ಥಿ ನೂರ್ ಜಹಾನ್ ಅವರ ಮೇಲೆ. ಸದ್ಯಕ್ಕೆ ಸಾಮಾನ್ಯ ವರ್ಗಕ್ಕೆ ಪಾಲಿಕೆ ಮೇಯರ್ ಸ್ಥಾನ ನಿಗದಿಯಾಗಿದೆ. ಇದನ್ನು ಬದಲಾಯಿಸಲು ಬಿಜೆಪಿ ಪ್ಲಾನ್ ರೂಪಿಸುತ್ತಿದೆ ಎನ್ನಲಾಗಿದೆ. ಉಪಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ಸ್ಪಷ್ಟ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ABOUT THE AUTHOR

...view details