ದಾವಣಗೆರೆ: ಕಟರ್ನಿಂದ ಎಟಿಎಂ ಯಂತ್ರ ಕಟ್ ಮಾಡಿ ಖದೀಮರು ಲಕ್ಷಾಂತರ ರೂ. ಹಣ ದೋಚಿರುವ ಘಟನೆ ದಾವಣಗೆರೆ ನಗರದ ಬಿಐಇಟಿ ಕಾಲೇಜ್ ಬಳಿಯ ವಿವೇಕಾನಂದ ಬಡಾವಣೆಯಲ್ಲಿ ನಡೆದಿದೆ.
ದಾವಣೆಗೆರೆ; ಎಟಿಎಂ ಯಂತ್ರ ಕೊರೆದು ಹಣ ದೋಚಿದ ಖದೀಮರು - Thieves who stole money from ATM machine
ತಡರಾತ್ರಿ ಎಕ್ಸಿಸ್ ಬ್ಯಾಂಕ್ಗೆ ಸೇರಿದ ಎಟಿಎಂನಲ್ಲಿ ಲಕ್ಷಾಂತರ ರೂ. ಹಣ ದೋಚಿ ಖದೀಮರು ಪರಾರಿಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಎಟಿಎಂ
ತಡರಾತ್ರಿ ಎಕ್ಸಿಸ್ ಬ್ಯಾಂಕ್ಗೆ ಸೇರಿದ ಎಟಿಎಂ ಅನ್ನು ಕಟ್ ಮಾಡಿ ಕಳ್ಳರು ಹಣ ದೋಚಿದ್ದು, ಈ ಕುರಿತು ವಿದ್ಯಾನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾರೆ.
ಇನ್ನು ಎಟಿಎಂ ನಿಂದ ಎಷ್ಟು ಹಣವನ್ನು ಕಳ್ಳರು ಎಗರಿಸಿದ್ದಾರೆ ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ. ದಾವಣಗೆರೆ ನಗರದ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.