ದಾವಣಗೆರೆ:ಜನರೇ ಮಾಸ್ಕ್ ಹಾಕದೇ ಮನೆಯಿಂದ ಹೊರಬರುವ ಮುನ್ನ ಯೋಚಿಸಿ..ಮಾಸ್ಕ್ ಹಾಕದಿದ್ದರೆ ಇನ್ನು ಮುಂದೆ ದಂಡ ಬೀಳೋದು ಗ್ಯಾರಂಟಿ..! ದಾವಣಗೆರೆಯಲ್ಲಿ ಕೊರೊನಾ ಹಾವಳಿ ನಿಯಂತ್ರಿಸಲು ಎಸ್ಪಿ ಸಿ.ಬಿ. ರಿಷ್ಯಂತ್ ಅವರು ಮಾಸ್ಕ್ ಹಾಕದವರ ಮೇಲೆ ದಂಡ ಮತ್ತು ಕ್ರಮ ಖಂಡಿತ ಎಂದು ಹೇಳಿದ್ದಾರೆ.
ನಗರದಲ್ಲಿ ಇಂದು ಮಾಸ್ಕ್ ಹಾಕದವರಿಗೆ ದಂಡ ಹಾಕಿ ಬಳಿಕ ಮಾತನಾಡಿದ ಅವರು, ಪ್ರತಿಯೊಂದು ಏರಿಯಾಗಳಲ್ಲಿ ಪೊಲೀಸ್ ತಂಡಗಳನ್ನು ನೇಮಕ ಮಾಡಲಾಗಿದೆ. ಮಾಸ್ಕ್ ಹಾಕದೇ ಹೊರ ಬರುವವರ ಮೇಲೆ ಇನ್ಮುಂದೆ ದಂಡ ಪ್ರಯೋಗ ಮಾಡುವುದು ಪಕ್ಕಾ ಎಂದು ಹೇಳಿದ್ದಾರೆ.