ಕರ್ನಾಟಕ

karnataka

ETV Bharat / city

ಅವಶ್ಯಕತೆ ಬಿದ್ರೆ ಕ್ವಾರಂಟೈನ್‍ನಲ್ಲಿರುವವರು ಲಾಡ್ಜ್‌ ರೂಮ್‌ಗಳಿಗೆ ಶಿಫ್ಟ್‌: ಡಿಸಿ ಮಹಾಂತೇಶ್​ ಬೀಳಗಿ - home quarantine

ಹೋಮ್ ಕ್ವಾರಂಟೈನ್‍ಲ್ಲಿರುವವರು ರೋಗಿಗಳಲ್ಲ, ಬದಲಾಗಿ ನಿಗಾದಲ್ಲಿರುವವರಷ್ಟೇ.. ಇವರಲ್ಲಿ ಯಾರಿಗಾದರೂ ನೆಗಡಿ, ಕೆಮ್ಮು,ಶೀತ ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ಸೇರಿಸಲಾತ್ತೆ. ಇವರನ್ನು ಕಾಳಜಿ ಮಾಡಲು ಕೊರೊನಾ ಸ್ವಯಂ ಸೇವಕರು ನಿಮ್ಮ ಜೊತೆಗಿರುತ್ತಾರೆ. ಲಾಡ್ಜ್‌ಗಳಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲು ಮಾಲೀಕರು ಸಿದ್ಧರಿರಬೇಕು.

DC mahanthesh bilagi
ತುಂಗಭದ್ರಾ ಸಭಾಂಗಣದ

By

Published : Apr 1, 2020, 1:28 PM IST

Updated : Apr 1, 2020, 7:33 PM IST

ದಾವಣಗೆರೆ :ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್‍ನಲ್ಲಿರುವವರನ್ನು ಲಾಡ್ಜ್ ರೂಮ್‌ಗಳಲ್ಲಿರಿಸಲು ನಿರ್ಧರಿಸಲಾಗಿದೆ ಎಂದು ಡಿಸಿ ಮಹಾಂತೇಶ್​ ಬೀಳಗಿ ತಿಳಿಸಿದ್ದಾರೆ.

ಜಿಲ್ಲಾಡಳಿತ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ನಗರದ ಲಾಡ್ಜ್ ಮಾಲೀಕರೊಂದಿಗೆ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 3 ಕೊರೊನಾ ಪಾಸಿಟಿವ್ ಪತ್ತೆಯಾಗಿವೆ. ಮುಂದಿನ ದಿನಗಳಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾದ್ರೆ, ಅಂತಹ ಸಂದರ್ಭದಲ್ಲಿ ನಗರದಲ್ಲಿನ ಲಾಡ್ಜ್‌ಗಳಲ್ಲಿರುವ ರೂಮ್‌ಗಳನ್ನ ಬಳಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಬಹುದು. ಎಸಿ ರೂಮ್‍ಗಳಿದ್ರೆ, ಎಸಿ ಕಡಿತಗೊಳಿಸಿ ಬಳಸಲಾಗುವುದು. ಈ ಹಿನ್ನೆಲೆಯಲ್ಲಿ ಮಾನಸಿಕವಾಗಿ ಸನ್ನದ್ಧರಾಗಬೇಕು ಎಂದು ಲಾಡ್ಜ್ ಮಾಲೀಕರಿಗೆ ಸೂಚಿಸಿದರು.

ಈ ಬಗ್ಗೆ ಮಾಲೀಕರಿಗೆ ಯಾವುದೇ ಭಯ ಬೇಡ. ಹೋಮ್ ಕ್ವಾರಂಟೈನ್‍ಲ್ಲಿರುವವರು ರೋಗಿಗಳಲ್ಲ, ಬದಲಾಗಿ ನಿಗಾದಲ್ಲಿರುವವರಷ್ಟೇ.. ಇವರಲ್ಲಿ ಯಾರಿಗಾದರೂ ನೆಗಡಿ, ಕೆಮ್ಮು,ಶೀತ ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ಸೇರಿಸಲಾಗುವುದು. ಇವರನ್ನು ಕಾಳಜಿ ಮಾಡಲು ಕೊರೊನಾ ಸ್ವಯಂ ಸೇವಕರು ನಿಮ್ಮ ಜೊತೆಗಿರುತ್ತಾರೆ ಎಂದು ಹೇಳಿದರು. ಲಾಡ್ಜ್‌ಗಳಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲು ಮಾಲೀಕರು ಸಿದ್ಧರಿರಬೇಕು.

ಉಚಿತವಾಗಿ ಬಳಸಿಕೊಳ್ಳದೇ ಸರ್ಕಾರದಿಂದ ಹಣ ಪಾವತಿಸಲಾಗುವುದು. ಊಟದ ವ್ಯವಸ್ಥೆ ಮಾಡಲು ಆಗದಿದ್ದರೆ ಅದನ್ನೂ ಸಹ ಜಿಲ್ಲಾಡಳಿತವೇ ನೋಡಿಕೊಳ್ಳಲಿದೆ ಎಂದ ಅವರು, ಈಗಾಗಲೇ ಪ್ರತಿ ತಾಲೂಕಿನಲ್ಲೂ ತಲಾ ಒಂದು ಕಲ್ಯಾಣ ಮಂಟಪ ಸೇರಿ ಈಗಾಗಲೇ ಜಿಲ್ಲೆಯಲ್ಲಿ11 ಕಲ್ಯಾಣ ಮಂಟಪಗಳನ್ನು ಜಿಲ್ಲಾಡಳಿತದ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಮುಂದೆ ಅಗತ್ಯ ಬಿದ್ರೇ ಕಲ್ಯಾಣ ಮಂಟಪಗಳನ್ನೂ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ವಿವಿಧ ತಾಲೂಕು ವಲಯದಲ್ಲಿಯೂ ಕೂಡ ಕಲ್ಯಾಣ ಮಂಟಪವನ್ನು ಸುಪರ್ದಿಗೆ ತೆಗೆದುಕೊಳ್ಳಲು ತಹಶೀಲ್ದಾರ್​ಗಳಿಗೆ ತಿಳಿಸಲಾಗಿದೆ ಎಂದರು. ಮಹಾನಗರ ಪಾಲಿಕೆ ಮೇಯರ್ ಅಜಯ್ ಕುಮಾರ್‌ ಮಾತನಾಡಿ, ಜನರ ನೋವು, ಕಷ್ಟದ ಅರಿವು ನಮಗಿದೆ. ಈ ಬಗ್ಗೆ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈಗಲೇ ಲಾಡ್ಜ್‌ಗಳ ರೂಮ್‍ಗಳ ಅವಶ್ಯಕತೆಯಿಲ್ಲ. ಬದಲಾಗಿ ಅಂತಹ ಸಂದರ್ಭ ಎದುರಾದರೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾಡಳಿತ, ಮಹಾನಗರ ಪಾಲಿಕೆ ನಿಮ್ಮ ಜೊತೆಗಿದೆ. ಶುಚಿತ್ವ ಕಾಪಾಡಿಕೊಂಡು ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ರೂಮ್‍ನಲ್ಲಿರಿಸುವವರು ಪಾಸಿಟಿವ್ ವ್ಯಕ್ತಿಗಳಲ್ಲ. ಅವರಲ್ಲಿ ಯಾವುದೇ ರೋಗದ ಲಕ್ಷಣ ಇರುವುದಿಲ್ಲ. ಆದರೆ, ಅವರ ಆರೋಗ್ಯದ ಕಾಳಜಿ ದೃಷ್ಟಿಯಿಂದ ಹೋಂ ಕ್ವಾರಂಟೈನ್‍ನಲ್ಲಿರುವವರಿಗಾಗಿ ರೂಮ್‍ಗಳ ಅವಶ್ಯಕತೆ ಬಂದರೆ ಉಪಯೋಗಿಸಿಕೊಳ್ಳಲಾಗುವುದು. ಆದರೆ, ಅಂತಹ ಸಂದರ್ಭ ಬರುವುದಿಲ್ಲ ಎಂದು ಭಾವಿಸಿರುವೆ. ದಯಮಾಡಿ ಸಹಕರಿಸಿ ಎಂದು ಮನವಿ ಮಾಡಿದರು.

Last Updated : Apr 1, 2020, 7:33 PM IST

ABOUT THE AUTHOR

...view details