ದಾವಣಗೆರೆ: ನೆರೆ ಹಾವಳಿಯಿಂದ ತತ್ತರಿಸಿರುವ ಉತ್ತರ ಕರ್ನಾಟಕ ಭಾಗದ ನರಗುಂದ, ನವಲಗುಂದ ಪ್ರದೇಶಗಳ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಮುಂದಾಗಿದ್ದಾರೆ.
ಸಂತ್ರಸ್ತರ ಸಮಸ್ಯೆ ಆಲಿಸಿ ಅಗತ್ಯ ವಸ್ತುಗಳ ಪೂರೈಕೆ: ಶರವಣ ಭರವಸೆ - Supply of essential items for flood residents
ನೆರೆಯಿಂದ ತತ್ತರಿಸಿರುವ ಉತ್ತರ ಕರ್ನಾಟಕ ಭಾಗದ ನರಗುಂದ, ನವಿಲುಗುಂದ ಸ್ಥಳಗಳ ಸಂತ್ರಸ್ತರಿಗೆ ಅಗತ್ಯವಾದ ವಸ್ತುಗಳನ್ನು ಪೂರೈಸುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಹೇಳಿದ್ದಾರೆ.
Supply of essential items for flood residents
ನೆರೆಯಿಂದ ಹಾನಿಯಾದ ಸ್ಥಳಗಳಿಗೆ ಖುದ್ದು ಭೇಟಿಯಾಗಿ ಅಲ್ಲಿನ ಜನರಿಗೆ ದಿನಸಿ, ನಗದು ನೀಡಲು ತೆರಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಆರ್ಯ ವೈಶ್ಯ ಮಹಾಮಂಡಳ ವತಿಯಿಂದ ಅಗತ್ಯ ವಸ್ತುಗಳನ್ನು ಈಗಾಗಲೇ ಕಳುಹಿಸಿದ್ದೇನೆ. ಇಂದು, ನಾಳೆ ನವಲಗುಂದ, ನರಗುಂದ ಗೋಕಾಕ್ ಸೇರಿದಂತೆ ಹಾನಿಯಾದ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಪರಿಶೀಲಿಸುತ್ತೇನೆ. ಬೇಕಾದ ಅಗತ್ಯ ವಸ್ತಗಳನ್ನು ಪಟ್ಟಿ ಮಾಡುತ್ತೇನೆ ಎಂದು ಹೇಳಿದ್ದಾರೆ.