ಕರ್ನಾಟಕ

karnataka

ETV Bharat / city

ಸೂಳೆಕೆರೆ ಬೆಟ್ಟದ ಮೇಲೆ ಯುವಕನ ಹತ್ಯೆ: ಆರೋಪಿಗಳ ಬಂಧನ ಶೀಘ್ರ - ದಾವಣಗೆರೆ ಜಿಲ್ಲಾ ಸುದ್ದಿ

ಸೂಳೆಕೆರೆ ಸಮೀಪದ ಬೆಟ್ಟದ ಮೇಲೆ ನಡೆದ ಯುವಕನ ಹತ್ಯೆ ಪ್ರಕರಣದ ಕುರಿತು ಹಲವಾರು ಸಾಕ್ಷ್ಯಾಧಾರಗಳು ದೊರಕಿದ್ದು ಆದಷ್ಟು ಬೇಗ ಅರೋಪಿಗಳನ್ನು ಬಂಧಿಸುವುದಾಗಿ ದಾವಣಗೆರೆ ಎಸ್ಪಿ ಹನುಮಂತರಾಯ ಹೇಳಿದ್ದಾರೆ.

sulekere-hill-murder-case
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ

By

Published : Jul 13, 2020, 5:58 PM IST

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆ ಸಮೀಪದ ಬೆಟ್ಟದ ಮೇಲೆ ನಾಗರಕಟ್ಟೆ ಯುವಕನ ತಲೆಗೆ ಗುಂಡು ಹೊಡೆದು ಹತ್ಯೆ ಮಾಡಿರುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ. ಇನ್ನೆರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

ಸೂಳೆಕೆರೆ ಬೆಟ್ಟದ ಮೇಲೆ ಯುವಕನ ಹತ್ಯೆ ಪ್ರಕರಣ

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜುಲೈ 10 ರಂದು ಬೈಕ್​ನಲ್ಲಿ‌ ಮನೆಯಿಂದ ನಾಗರಕಟ್ಟೆಯ ಚಂದ್ರನಾಯ್ಕ ತೆರಳಿದ್ದಾನೆ. ಬಳಿಕ ಆತನ ಮೃತದೇಹ ಬೆಟ್ಟದ ಮೇಲೆ‌ ಸಿಕ್ಕಿತ್ತು. ರಾತ್ರಿಯಾದ ಕಾರಣ ಅಲ್ಲಿಗೆ ಹೋಗಲು ಬಸವಪಟ್ಟಣ ಪೊಲೀಸರಿಗೆ ಸಾಧ್ಯವಾಗಿರಲಿಲ್ಲ.‌ ಬೆಳಿಗ್ಗೆ ಅಲ್ಲಿಗೆ ಹೋದಾಗ ಮೃತದೇಹ ಸಿಕ್ಕಿದ್ದು, ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿ ತಲೆಗೆ ಗುಂಡು ಹೊಡೆದು ಕೊಲ್ಲಲಾಗಿದೆ ಎಂಬುದು ಖಚಿತಪಟ್ಟಿದೆ. ಯಾವ ಪಿಸ್ತೂಲ್‌ನಿಂದ ಗುಂಡು ಹಾರಿಸಲಾಗಿದೆ, ಈ ಕೃತ್ಯ ಎಸಗಿದವರು ಯಾರು ಎಂಬ ಬಗ್ಗೆ ಮಾಹಿತಿ‌ ಸಿಕ್ಕಿದ್ದು, ಆದಷ್ಟು ಬೇಗ ಪ್ರಕರಣದ ಹಿಂದಿರುವ ಹಂತಕರ ಪತ್ತೆ ಹಚ್ಚುತ್ತೇವೆ ಎಂದು ತಿಳಿಸಿದರು.

ಮೃತದೇಹ ಸಿಕ್ಕ ಸ್ಥಳದಲ್ಲಿ ಸಿಕ್ಕಿರುವ ವಸ್ತುಗಳನ್ನು‌ ನೋಡಿದರೆ ಮದ್ಯದ ಪಾರ್ಟಿ ನಡೆದಿರುವುದು ತಿಳಿದು ಬಂದಿದೆ. ಹತ್ಯೆಗೀಡಾದ ಚಂದ್ರನಾಯ್ಕನ ಸ್ನೇಹಿತರು ಹಾಗೂ ಸಂಗಡಿಗರು ಈ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದ್ದು, ಇವರೆಲ್ಲರೂ ನಾಗರಕಟ್ಟೆ ಗ್ರಾಮದವರು ಎಂಬ ಮಾಹಿತಿ ಸಿಕ್ಕಿದೆ.

ಹಣಕ್ಕಾಗಿ ಹತ್ಯೆ ನಡೆಯಿತಾ.. ಇಲ್ಲಾ ಚಿನ್ನದ ಬಿಸ್ಕತ್ ವಿಚಾರಕ್ಕೆ ಸಂಬಂಧಿಸಿದಂತೆ ಆಗಿರಬಹುದಾ, ಎಂಬುದು ಸೇರಿದಂತೆ ಎಲ್ಲಾ ಆಯಾಮದಿಂದ ತನಿಖೆ ಮುಂದುವರಿದಿದೆ. ಶ್ವಾನದಳ ಸಿಬ್ಬಂದಿ ಸ್ಥಳ ಪರೀಶೀಲನೆ ಮಾಡಿದ್ದು, ಆರೋಪಿಗಳು ಓಡಾಡಿರುವ ಜಾಗದಲ್ಲಿ, ಮಹತ್ವದ ಸಾಕ್ಷ್ಯಗಳು ಸಿಗಲು ಸಹಕಾರಿಯಾಗಿದೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details