ಕರ್ನಾಟಕ

karnataka

By

Published : Dec 15, 2021, 7:58 PM IST

ETV Bharat / city

ಶಿಕ್ಷಕರಿಗೆ ಅವಮಾನ ಪ್ರಕರಣ : ಗುರುವಿನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ವಿದ್ಯಾರ್ಥಿಗಳು

6 ವಿದ್ಯಾರ್ಥಿಗಳು ಹಿಂದಿ ಶಿಕ್ಷಕರ ತಲೆಗೆ ಕಸದ ಬುಟ್ಟಿ ಹಾಕಿ ಅವಮಾನಿಸಿದ್ದರು. ಆರು ವಿದ್ಯಾರ್ಥಿಗಳ ಪೈಕಿ ಮೊನ್ನೆ ಒಬ್ಬ ವಿದ್ಯಾರ್ಥಿ ಮಾತ್ರ ಶಿಕ್ಷಕನ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದ. ಇದೀಗ ಇನ್ನುಳಿದ 5 ವಿದ್ಯಾರ್ಥಿಗಳಿಂದ ಗ್ರಾಮಸ್ಥರು ಕ್ಷಮೆ ಕೇಳಿಸಿದ್ದಾರೆ..

students asked apology with teacher in davanagere
ಗುರುವಿನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ವಿದ್ಯಾರ್ಥಿಗಳು

ದಾವಣಗೆರೆ : ಪಾಠ ಮಾಡಲು ತರಗತಿಗೆ ಬಂದು ಕುಳಿತಿದ್ದ ಹಿಂದಿ ಶಿಕ್ಷಕರ ತಲೆ ಮೇಲೆ ಕಸದ ಬಕೆಟ್ ಹಾಕಿ ಅವಮಾನ ಮಾಡಿದ್ದ ಎಲ್ಲಾ ಪುಂಡ ವಿದ್ಯಾರ್ಥಿಗಳು ಇದೀಗ ಗುರುವಿನ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ.

6 ಜನ ವಿದ್ಯಾರ್ಥಿಗಳು ಹಿಂದಿ ಶಿಕ್ಷಕರ ತಲೆಗೆ ಕಸದ ಬುಟ್ಟಿ ಹಾಕಿ ಅವಮಾನಿಸಿದ್ದರು. ಆರು ಜನ ವಿದ್ಯಾರ್ಥಿಗಳ ಪೈಕಿ ಮೊನ್ನೆ ಒಬ್ಬ ವಿದ್ಯಾರ್ಥಿ ಮಾತ್ರ ಶಿಕ್ಷಕನ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದ. ಇದೀಗ ಇನ್ನುಳಿದ 5 ವಿದ್ಯಾರ್ಥಿಗಳಿಂದ ಗ್ರಾಮಸ್ಥರು ಕ್ಷಮೆ ಕೇಳಿಸಿದ್ದಾರೆ.

ಗುರುವಿನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ವಿದ್ಯಾರ್ಥಿಗಳು

ಡಿ.3 ರಂದು ತರಗತಿಯ ಕೊಠಡಿಯಲ್ಲೇ ಶಿಕ್ಷಕ ಪ್ರಕಾಶ್ ಅವರಿಗೆ ಆರು ಮಂದಿ ವಿದ್ಯಾರ್ಥಿಗಳು ಕೀಟಲೆ ಮಾಡಿದ್ದರು. ಶಿಕ್ಷಕರ ತಲೆಗೆ ಕಸದ ಬುಟ್ಟಿ ಹಾಕಿ ವಿಕೃತಿ ಮೆರೆದಿದ್ದರು. ಆದರೂ ಶಿಕ್ಷಕ ಪ್ರಕಾಶ್ ತಾಳ್ಮೆಯಿಂದ ವಿದ್ಯಾರ್ಥಿಗಳ ಭವಿಷ್ಯ ಹಿನ್ನೆಲೆ ಯಾರಿಗೂ ವಿಷಯ ತಿಳಿಸಿರಿಲಿಲ್ಲ. ಆದ್ರೆ, ಗುರುಗಳನ್ನು ನಿಂದಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇದನ್ನೂ ಓದಿ:ಶಿಕ್ಷಕರ ತಲೆ ಮೇಲೆ ಬಕೆಟ್​​ ಹಾಕಿ ಪುಂಡಾಟ : ಗುರುವಿನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ವಿದ್ಯಾರ್ಥಿಗಳು

ವಿಡಿಯೋ ನೋಡಿದ ಜನರು ಘಟನೆಗೆ ಖಂಡಿಸಿ ವಿದ್ಯಾರ್ಥಿಗಳನ್ನು ಶಾಲೆಯಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿದ್ದರು. ಇದೀಗ ಉಳಿದ 5 ವಿದ್ಯಾರ್ಥಿಗಳನ್ನು ಕರೆಸಿ ಶಿಕ್ಷಕನ ಕಾಲಿಗೆ ಬೀಳಿಸಿ ಮತ್ತೊಮ್ಮೆ ಈ ಘಟನೆ ಮರುಕಳಿಸದಂತೆ ಎಚ್ಚರಿಕೆ ನೀಡಲಾಗಿದೆ.

ABOUT THE AUTHOR

...view details