ಕರ್ನಾಟಕ

karnataka

ETV Bharat / city

ನನ್ನ ಒಳ್ಳೆಯ ಗೆಳೆಯನ ಸ್ಥಾನದಲ್ಲಿದ್ದ ಅಪ್ಪುವಿನ ಸಾವನ್ನ ಇನ್ನೂ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ರಾಜೇಶ್ ಕೃಷ್ಣನ್ - Puneeth Rajkumar

ಅಪ್ಪು ಅಗಲಿಕೆಯಿಂದ ಇಡೀ ಕರ್ನಾಟಕಕ್ಕೆ, ಸಿನಿ ರಂಗಕ್ಕೆ ಅಪರವಾದ ನಷ್ಟವಾಗಿದೆ. ಇಷ್ಟು ಬೇಗ ಅವರು ಹೋಗಬಾರದಿತ್ತು, ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರು ನೇತ್ರದಾನ ಮಾಡುವ ಮೂಲಕ ಯುವರತ್ನ ಬದಲಿಗೆ ಚಿರರತ್ನ, ಶಾಶತ್ವ ರತ್ನ ಆಗಿ ಉಳಿದಿದ್ದಾರೆ ಎಂದು ರಾಜೇಶ್​ ಕೃಷ್ಣನ್​ ಹೇಳಿದ್ದಾರೆ.

ಪುನೀತ್ ರಾಜ್​ ಕುಮಾರ್​ ಶ್ರದ್ಧಾಂಜಲಿ

By

Published : Nov 9, 2021, 1:54 AM IST

ದಾವಣಗೆರೆ: ಅಪ್ಪು ಅವರ ಸಾವು ಅರಗಿಸಿಕೊಳ್ಳಲು ಆಗ್ತಿಲ್ಲ, ಅದೊಂದು ದೊಡ್ಡ ಶಾಕ್, ನನ್ನ ಒಳ್ಳೆಯ ಗೆಳೆಯನ ಸ್ಥಾನದಲ್ಲಿದ್ದಾ ಅಪ್ಪುವಿನ ಸಾವು ಜೀರ್ಣಿಸಿಕೊಳ್ಳಲಾಗುತ್ತಿಲ್ಲ ಎಂದು ಹಿನ್ನಲೆ ಗಾಯಕ ರಾಜೇಶ್ ಕೃಷ್ಣನ್ ಭಾವುಕರಾದರು.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪುನೀತ್ ರಾಜ್​ಕುಮಾರ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಪ್ಪು ಅವರ ಸಾವು ದೊಡ್ಡ ಶಾಕ್ ಎಂದು ಹೇಳಿದರೆ ಅಉ ಸಣ್ಣ ಪದವಾಗುತ್ತೆ, ನನಗೆ ಇನ್ನೂ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ಈ ಕ್ಷೇತ್ರಕ್ಕೆ ದೊಡ್ಡ ಕಾರ್ಯಕ್ರಮ ನೀಡಲು ಬಂದಿದ್ದೆ, ಆದರೆ ಈ ಕಾರ್ಯಕ್ರಮಕ್ಕೆ ಬರ್ತೀನಿ ಅಂತ ಊಹೇ ಮಾಡಿರಲಿಲ್ಲ. ಎಂತಹ ವ್ಯಕ್ತಿತ್ವ ಪುನೀತ್​ರದ್ದು, ಅವರು ಇದ್ದಾಗ ಇದ್ದಷ್ಟು ಬೆಳಕು, ಅವರು ಹೋದ ಮೇಲೆ ರಾಜ್ಯದಲ್ಲಿ ಪ್ರಜ್ವಲಿತವಾಗಿದೆ. ಏಕೆಂದರೆ ಅವರ ಸಮಾಜಸೇವೆ ಬಲಗೈಯಿಂದ ಕೊಟ್ಟರೆ ಎಡಗೈಗೆ ಗೊತ್ತಗಿರಲಿಲ್ಲ. ಈ ತರದ ವ್ಯಕ್ತಿತ್ವ ಹುಟ್ಟುವುದು ಬಹಳ ವಿರಳ. ಅವರು ಇಷ್ಟು ಬೇಗ ಹೋಗಬಾರದಿತ್ತು.

ಅಪ್ಪುವಿನ ಸಾವನ್ನ ಇನ್ನೂ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ರಾಜೇಶ್ ಕೃಷ್ಣನ್

ಅವರ ಅಗಲಿಕೆಯಿಂದ ಇಡೀ ಕರ್ನಾಟಕಕ್ಕೆ, ಸಿನಿ ರಂಗಕ್ಕೆ ಅಪರವಾದ ನಷ್ಟವಾಗಿದೆ. ಇಷ್ಟು ಬೇಗ ಅವರು ಹೋಗಬಾರದಿತ್ತು, ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರು ನೇತ್ರದಾನ ಮಾಡುವ ಮೂಲಕ ಯುವರತ್ನ ಬದಲಿಗೆ ಚಿರರತ್ನ, ಶಾಶತ್ವ ರತ್ನ ಆಗಿ ಉಳಿದಿದ್ದಾರೆ. ಇನ್ನು ಜನ ಸೇವೆ, ಗೋಶಾಲೆ, ಅನಾಥಶ್ರಮ, ವೃದ್ಧಾಶ್ರಮ ನೋಡಿಕೊಳ್ಳುವುದು ಸಾಮಾನ್ಯವಾದಲ್ಲ ಅದನ್ನು ಅಪ್ಪು ಮಾಡಿದ್ದಾರೆ. ಅವರಲ್ಲಿದ್ದ ಆ ವಿನಯತೆ ಅವರಿಗೆ ರಕ್ತಗತವಾಗಿ ಬಂದಿದೆ. ಅತಂಹ ಮೇರು ನಟ ನಮ್ಮನ್ನು ಅಗಲಿದ್ದಾರೆ ಎಂದರೆ ತುಂಬ ದುಃಖ ಆಗುತ್ತದೆ ಎಂದು ರಾಜೇಶ್ ಕೃಷ್ಣನ್ ಬೇಸರ ವ್ಯಕ್ತಪಡಿಸಿದರು.ಪುನೀತ್​

ಇದನ್ನು ಓದಿ:ರಾಜ್​ಕುಮಾರ್​ ಪುಣ್ಯತಿಥಿ: ಕಾವೇರಿ ನದಿಗೆ ತರ್ಪಣ ಬಿಟ್ಟ ವಿನೋದ್​ ರಾಜ್​

ABOUT THE AUTHOR

...view details