ಕರ್ನಾಟಕ

karnataka

ETV Bharat / city

ಕುಡಿದ ಮತ್ತಿನಲ್ಲಿ ಅಮ್ಮನೊಂದಿಗೆ ಜಗಳವಾಡುತ್ತಿದ್ದ ತಂದೆಯನ್ನೇ ಕೊಂದ ಮಗ - ದಾವಣಗೆರೆ ಮಾಯಕೊಂಡ ತಂದೆಯ ಮೇಲೆ ಮಗನಿಂದ ಹಲ್ಲೆ

ಮದ್ಯ ಸೇವಿಸಿ ತಾಯಿಯ ಜೊತೆ ಜಗಳವಾಡುತ್ತಿದ್ದ ತಂದೆಯನ್ನು ಮನಬಂದಂತೆ ಥಳಿಸಿ ಹತ್ಯೆಗೈದ ಘಟನೆ ದಾವಣಗೆರೆ ಜಿಲ್ಲೆಯ ಮಾಯಗೊಂಡದಲ್ಲಿ ನಡಿದಿದೆ.

a-son-killed-his-father-in-davanagere-mayagonda
ತಂದೆಯನ್ನ ಕೊಂದ ಮಗ

By

Published : Sep 9, 2021, 8:54 PM IST

ದಾವಣಗೆರೆ: ಕುಡಿದು ಜಗಳ ಮಾಡುತ್ತಿದ್ದ ಎಂಬ ಒಂದೇ ಕಾರಣಕ್ಕೆ ಮಗನೊಬ್ಬ ತನ್ನ ತಂದೆಯ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿ ಹತ್ಯೆಗೈದ ಘಟನೆ ಜಿಲ್ಲೆಯ ಮಾಯಕೊಂಡದಲ್ಲಿ ಜರುಗಿದೆ.

ರಾಮಪ್ಪ ಮೃತ ದುರ್ದೈವಿ. ಪ್ರತಿನಿತ್ಯ ಕುಡಿದು ಬಂದು ಹೆಂಡತಿ ಜೊತೆ ರಾಮಪ್ಪ ಜಗಳವಾಡುತ್ತಿದ್ದ. ಇದರಿಂದ ಬೇಸತ್ತಿದ್ದ ಮಗ ಸಂತೋಷ್​​​ ಕಳೆದ ನಾಲ್ಕು ದಿನಗಳ ಹಿಂದೆ ತಂದೆಯ ಮೇಲೆ ಹಲ್ಲೆ ಮಾಡಿ ಥಳಿಸಿದ್ದಾನೆ. ಘಟನೆಯಲ್ಲಿ ರಾಮಪ್ಪನ ಕೈ, ಕಾಲು, ಮುಖ ಹಾಗೂ ಕತ್ತಿಗೆ ಗಂಭೀರವಾಗಿ ಗಾಯಗಳಾಗಿದ್ದವು.

ಮನೆಯಲ್ಲಿಯೇ ನರಳಿ ಸತ್ತ ತಂದೆ: ಹಲ್ಲೆ ನಡೆಸಿ ನಾಲ್ಕು ದಿನಗಳು ಕಳೆದ್ರು ಕೂಡ ತಂದೆಯನ್ನು ಆಸ್ಪತ್ರೆಗೆ ಸೇರಿಸದ ಸಂತೋಷ್ ಮನೆಯಲ್ಲೇ ಇರಿಸಿದ್ದ. ಈ ವಿಚಾರ ಊರಿನವರಿಗೆ ತಿಳಿದು, ಆಸ್ಪತ್ರೆಗೆ ಸೇರಿಸಲು ತಿಳಿಸಿದ್ದರು. ಆದರೂ ಕೂಡ ಸಂತೋಷ್ ಕಿವಿಗೆ ಹಾಕಿಕೊಂಡಿರಲಿಲ್ಲ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ರಾಮಪ್ಪ ಕೊನೆಯುಸಿರೆಳೆದಿದ್ದಾನೆ. ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details