ಕರ್ನಾಟಕ

karnataka

ETV Bharat / city

ಸ್ಮಾರ್ಟ್ ಸಿಟಿ ಯೋಜನೆ: ಕೇಂದ್ರ-ರಾಜ್ಯ ಸರ್ಕಾರದಿಂದ ದಾವಣಗೆರೆಗೆ 400 ಕೋಟಿ ರೂ. ಬಿಡುಗಡೆ

ಸ್ಮಾರ್ಟ್ ಸಿಟಿ ಯೋಜನೆಯಡಿ ಇದುವರೆಗೆ 400 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಈಗ ಕಾಮಗಾರಿ ವೇಗವಾಗಿ ನಡೆಯುತ್ತಿದೆ ಎಂದು ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್​​ನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ತಿಳಿಸಿದ್ದಾರೆ.

KN_DVG_03_31_SAMART_CITY_SCRIPT_7203307
ಸ್ಮಾರ್ಟ್ ಸಿಟಿ ಯೋಜನೆ, ಕೇಂದ್ರ-ರಾಜ್ಯ ಸರ್ಕಾರದಿಂದ ದಾವಣಗೆರೆ ಜಿಲ್ಲೆಗೆ 400 ಕೋಟಿ ರೂ. ಬಿಡುಗಡೆ

By

Published : Jan 31, 2020, 3:04 PM IST

ದಾವಣಗೆರೆ: ಸ್ಮಾರ್ಟ್ ಸಿಟಿ ಯೋಜನೆಯಡಿ ಇದುವರೆಗೆ 400 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಈಗ ಕಾಮಗಾರಿ ವೇಗವಾಗಿ ನಡೆಯುತ್ತಿದೆ ಎಂದು ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್​​ನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ತಿಳಿಸಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆ: ಕೇಂದ್ರ-ರಾಜ್ಯ ಸರ್ಕಾರದಿಂದ ದಾವಣಗೆರೆಗೆ 400 ಕೋಟಿ ರೂ. ಬಿಡುಗಡೆ
ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 200 ಕೋಟಿ ರಾಜ್ಯ ಸರ್ಕಾರ ಹಾಗೂ 132 ಕೋಟಿ ರೂಪಾಯಿ‌ ಕೇಂದ್ರ ಸರ್ಕಾರದಿಂದ ಬಿಡಗುಗಡೆಯಾಗಿದೆ. 68 ಕೋಟಿ ರೂಪಾಯಿ ಬಡ್ಡಿ ಬಂದಿದೆ. ಈ ಪೈಕಿ 147 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳು ನಡೆದಿದ್ದು, ಆದಷ್ಟು ಬೇಗ ಕೆಲಸ ಮುಗಿಸಲಾಗುವುದು ಎಂದು ಹೇಳಿದರು. 2017ರಲ್ಲಿ‌ ಕೇಂದ್ರ ಸರ್ಕಾರ ನಡೆಸಿದ್ದ 100 ಸ್ಮಾರ್ಟ್ ನಗರಗಳ ಸಮೀಕ್ಷೆಯಲ್ಲಿ ದಾವಣಗೆರೆ 82ನೇ ಸ್ಥಾನದಲ್ಲಿತ್ತು. ಈ ಬಾರಿಯೂ ಫೆಬ್ರವರಿ ತಿಂಗಳಿನಲ್ಲಿ ಸಮೀಕ್ಷೆ ನಡೆಸುತ್ತಿದೆ. ಜನರು ಆನ್​​ಲೈನ್ ಮೂಲಕ ಸ್ಮಾರ್ಟ್ ಸಿಟಿ ಬಗ್ಗೆ ಅಭಿಪ್ರಾಯ ತಿಳಿಸಬೇಕು. ಸಲಹೆ, ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details