ಕರ್ನಾಟಕ

karnataka

ETV Bharat / city

ಸಿದ್ದು ಬೇಗ ಗುಣಮುಖರಾಗಲಿ ಎಂದು ದೇವರಿಗೆ 101 ತೆಂಗಿನಕಾಯಿ ಒಡೆದ ಅಭಿಮಾನಿಗಳು - ಸಿದ್ದರಾಮಯ್ಯನವರಿಗೆ ಆ್ಯಂಜಿಯೋಪ್ಲಾಸ್ಟ್ ಶಸ್ತ್ರ ಚಿಕಿತ್ಸೆ

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶೀಘ್ರ ಗುಣಮುಖರಾಗಲೆಂದು ಕುರುಬರ ಯುವ ಘಟಕದಿಂದ ನಗರ ದೇವತೆ ದುಗ್ಗಮ್ಮನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

KN_DVG_02_SIDDU_POOJE_AVBB_KA10016
ಸಿದ್ದು ಗುಣಮುಖರಾಗಲಿ ಎಂದು 101 ತೆಂಗಿನಕಾಯಿ ಒಡೆದ ಕುರುಬ ಸಮಾಜ

By

Published : Dec 12, 2019, 3:10 PM IST

ದಾವಣಗೆರೆ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶೀಘ್ರ ಗುಣಮುಖರಾಗಲೆಂದು ಕುರುಬರ ಯುವ ಘಟಕದಿಂದ ನಗರ ದೇವತೆ ದುಗ್ಗಮ್ಮನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಸಿದ್ದು ಗುಣಮುಖರಾಗಲಿ ಎಂದು 101 ತೆಂಗಿನಕಾಯಿ ಒಡೆದ ಕುರುಬರ ಯುವ ಸಂಘ

ದಾವಣಗೆರೆ ನಗರ ದೇವತೆ ದುಗ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು, 101 ಕಾಯಿ ಒಡೆದು ಹರಕೆ ಸಮರ್ಪಿಸಿದರು. ಹೃದಯದ ರಕ್ತ ಪರಿಚಲನೆಯಲ್ಲಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರಿಗೆ ಆ್ಯಂಜಿಯೋಪ್ಲಾಸ್ಟ್ ಶಸ್ತ್ರಚಿಕಿತ್ಸೆ ಮಾಡಿದ್ದು, ಸದ್ಯ ಸ್ಟೆಂಟ್ ಅಳವಡಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಬಡವರ ಪಾಲಿನ ಆಶಾಕಿರಣ ಎನಿಸಿಕೊಂಡಿರುವ ಸಿದ್ದರಾಮಯ್ಯ ಆದಷ್ಟು ಬೇಗ ಗುಣಮುಖರಾಗಲಿ ಎಂದು ಸಿದ್ದರಾಮಯ್ಯ ಅಭಿಮಾನಿ ಲಿಂಗರಾಜ್ ನೇತೃತ್ವದಲ್ಲಿ ಕುರುಬ ಸಮಾಜ ಮತ್ತು ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ ದೇವರಲ್ಲಿ ಪ್ರಾರ್ಥಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details