ಹರಿಹರ :ಸರ್ಕಾರ ವಿರುದ್ದ ಹೋದರೆ ನಮ್ಮ ಕೆಲಸ ಆಗಲ್ಲ, ಅವರ ಬೆನ್ನುತಟ್ಟಿ ಅವರ ಜೊತೆ ಹೋಗಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿದ್ದಾರೆ.
ತಾಲೂಕಿನ ಹನಗವಾಡಿ ಗ್ರಾಮದ ಹೊರವಯದ ಪಂಚಮಸಾಲಿ ಪೀಠದಲ್ಲಿ ಹೇಳಿಕೆ ನೀಡಿದ ಅವರು, ರೈಲು ಬಹಳ ಸ್ಪೀಡಾಗಿ ಹೋಗಬಾರದು. ವಚನಾನಂದ ಸ್ವಾಮೀಜಿಗಳು ಬಹಳ ಸ್ಪೀಡ್ ಆಗಿ ಹೋಗ್ತಾ ಇದ್ದೀರಿ, ಬ್ರೇಕ್ ಹಾಕಿ, ಸಮಾಜ ಅಭಿವೃದ್ದಿಗೆ ಕ್ರಮ ಕೈಗೊಳ್ಳಿ ಎಂದು ವಚನಾನಂದ ಸ್ವಾಮಿ ಅವರಿಗೆ ಸಲಹೆ ನೀಡುವ ಮೂಲಕ ಪರೋಕ್ಷವಾಗಿ ಟಾಂಗ್ ನೀಡಿದರು.
ವಚನನಾಂದ ಸ್ವಾಮೀಜಿಗಳ ಕುರಿತು ಶಾಮನೂರು ಶಿವಶಂಕರಪ್ಪ ಹೇಳಿಕೆ ಯಡಿಯೂರಪ್ಪ ಮಠಗಳಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಆದರೆ, ಮಠಗಳು ಎಷ್ಟರ ಮಟ್ಟಿಗೆ ಅಭಿವೃದ್ಧಿಯಾಗಿವೆ ಎನ್ನುವುದು ಗೊತ್ತಿಲ್ಲ. ಜಿಲ್ಲೆಗೆ ನಮ್ಮ ಜನಾಂಗದ ಅಧಿಕಾರಿಗಳನ್ನು ಯಡಿಯೂರಪ್ಪ ನೀಡಿದ್ದಾರೆ. ಸಿದ್ದರಾಮಯ್ಯ ಇದ್ದಾಗ ಬೇರೆ ಸಮುದಾಯದವರು ಇದ್ದರು ಎಂದು ಲೇವಡಿ ಮಾಡಿದರು.
ವೀರಶೈವ - ಲಿಂಗಾಯತ ಎನ್ನುವ ಸಮಸ್ಯೆಯನ್ನು ಶಮನ ಮಾಡೋದು ಹೇಗೆ ಎಂದು ಗೊತ್ತಾಗುತ್ತಿಲ್ಲ, ಯಡಿಯೂರಪ್ಪ ನನ್ನ ಬೆನ್ನುತಟ್ಟಿ ನಾನಿದ್ದೇನೆ ಎಂದಿದ್ದಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ಮುಂದುವರೆಯುತ್ತಿದ್ದೇನೆ ಎಂದರು.