ದಾವಣಗೆರೆ:ಕುಡಿದ ಮತ್ತಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಭದ್ರಾ ನಾಲೆಗೆ ಕಾರು ಬಿದ್ದ ಘಟನೆ ನಗರದ ಶಾಮನೂರು ಬಳಿ ನಡೆದಿದೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಚಾಲಕ ನಿಯಂತ್ರಣ ಕಳೆದುಕೊಂಡು ನಾಲೆಗೆ ಇಳಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. KA01. MJ 4436 ನಂಬರ್ನ ಈ ಕಾರು ಬೆಂಗಳೂರಿಗೆ ಸೇರಿದ್ದು ಎನ್ನಲಾಗಿದೆ. ಮಾಲೀಕರು ಕಾರನ್ನು ನಾಲೆಯಲ್ಲೆ ಬಿಟ್ಟು ಹೋಗಿರುವ ಕಾರಣ ಕಾರು ತೇಲುತ್ತಿದೆ.