ಕರ್ನಾಟಕ

karnataka

ETV Bharat / city

ಮೇ 16ರಿಂದ ಶೈಕ್ಷಣಿಕ ವರ್ಷಾರಂಭ: ಕಲಿಕಾ ಚೇತರಿಕೆಗೆ 15 ದಿನಗಳ ರಜೆ ಕಡಿತ - 2022-23ನೇ ಶೈಕ್ಷಣಿಕ ಸಾಲಿನಲ್ಲಿ  1-9 ನೇ ತರಗತಿಯ ವಿದ್ಯಾರ್ಥಿಗಳಿಗೆ ಕಲಿಕಾ ಚೇತರಿಕೆ ಕಾರ್ಯಕ್ರಮ

ಕೋವಿಡ್ ಕಾರಣದಿಂದಾಗಿ ಮಕ್ಕಳ ಕಲಿಕಾ ಗುಣಮಟ್ಟ ಕಡಿಮೆಯಾಗಿರುವುದರಿಂದ ಕಲಿಕಾ ಚೇತರಿಕೆ ಎಂಬ 15 ದಿನಗಳ ಯೋಜನೆಯ ಮುಖಾಂತರ ಮಕ್ಕಳಲ್ಲಿ ಕಲಿಕಾ ಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದರು.

15 days leave reduction for learning recovery
ಶಿಕ್ಷಣ ಸಚಿವ ಬಿ.ಸಿ ನಾಗೇಶ್

By

Published : Apr 6, 2022, 8:11 PM IST

ಬೆಂಗಳೂರು: ಕೋವಿಡ್ ಕಾರಣದಿಂದಾಗಿ ಮಕ್ಕಳ ಕಲಿಕಾ ಗುಣಮಟ್ಟ ಆ ತರಗತಿಯ ಮಟ್ಟಕ್ಕೆ ಇಲ್ಲ ಎಂಬುದು ಸರ್ವೇ ಮೂಲಕ ಬಹಿರಂಗವಾಗಿದೆ. ಹೀಗಾಗಿ ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಸಹಯೋಗದಲ್ಲಿ ಶಿಕ್ಷಕರ ಸಂಘಗಳ ಪ್ರತಿನಿಧಿಗಳಿಗೆ ಕಲಿಕಾ ಚೇತರಿಕೆ ಎಂಬ ರಾಜ್ಯಮಟ್ಟದ ಕಾರ್ಯಾಗಾರ ಆಯೋಜಿಸಿದೆ.


ಈ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಬಿ.ಸಿ ನಾಗೇಶ್, 2022-23ನೇ ಶೈಕ್ಷಣಿಕ ಸಾಲಿನಲ್ಲಿ 1-9 ನೇ ತರಗತಿಯ ವಿದ್ಯಾರ್ಥಿಗಳಿಗೆ ಕಲಿಕಾ ಚೇತರಿಕೆ ಕಾರ್ಯಕ್ರಮ ನಡೆಯಲಿದೆ. ಈ ಸಲ 15 ದಿನಗಳ ರಜೆಯನ್ನು ಕಡಿತ ಮಾಡುತ್ತಿದ್ದು, ಇದಕ್ಕೆ ಎಲ್ಲ ಶಿಕ್ಷಕರು, ಪ್ರತಿನಿಧಿಗಳ ಸಹಕಾರ ಸಿಕ್ಕಿದೆ. ರಾಜ್ಯಾದ್ಯಂತ ಮುಂದಿನ ಶೈಕ್ಷಣಿಕ ಸಾಲು ಮೇ 16 ರಿಂದ ಶಾಲೆಗಳು ಆರಂಭವಾಗಲಿದ್ದು, 15 ದಿನಗಳ ಕಾಲ ಕಲಿಕಾ ಚೇತರಿಕೆಯನ್ನು ಹಮ್ಮಿಕೊಳ್ಳಲಿದ್ದೇವೆ. ಶಾಲೆ ಆರಂಭಕ್ಕೂ ಮುನ್ನವೇ ಮಕ್ಕಳ ಕಲಿಕಾ ಮಟ್ಟವೂ ಆ ತರಗತಿಗೆ ತಕ್ಕಂತೆ ಆಗಬೇಕು ಎಂಬುದು ನಮ್ಮ ಉದ್ದೇಶ ಎಂದರು.

ಇದನ್ನೂ ಓದಿ:ನಾಳೆ ಶಕ್ತಿಧಾಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ

ABOUT THE AUTHOR

...view details