ಕರ್ನಾಟಕ

karnataka

ETV Bharat / city

ಇನ್ನೂ 4 ಸೀಟ್‌ ಉಳಿಸಿಕೊಂಡಿದ್ದಾರೆ, ನನಗೂ ಸಚಿವ ಸ್ಥಾನ ಕೊಡ್ತಾರೆ: ಎಸ್.ಎ. ರವೀಂದ್ರನಾಥ್ - davanagere news

ಇನ್ನೂ ನಾಲ್ಕು ಸೀಟ್​ಗಳನ್ನು ಉಳಿಸಿಕೊಂಡಿದ್ದಾರೆ. ಅ ನಾಲ್ಕು ಸೀಟ್‌ಗಳಲ್ಲಿ ನನಗೂ ಒಂದು ಸ್ಥಾನ ಕೊಟ್ಟರೆ ಒಳ್ಳೆಯದು. ಒಂದು ವೇಳೆ ಕೊಟ್ಟಿಲ್ಲ ಅಂದ್ರೆ ಚಿಂತೆ‌ ಮಾಡುವುದಿಲ್ಲ ಎಂದು ಶಾಸಕ ಎಸ್.ಎ. ರವೀಂದ್ರನಾಥ್ ತಿಳಿಸಿದ್ದಾರೆ.

S.A.Ravindranath
ಎಸ್.ಎ.ರವೀಂದ್ರನಾಥ್

By

Published : Aug 7, 2021, 2:27 PM IST

ದಾವಣಗೆರೆ: ನಾನು ದೆಹಲಿಗೆ ಹೋಗಿಲ್ಲ, ಇನ್ನೂ ನಾಲ್ಕು ಸೀಟ್ ಉಳಿಸಿಕೊಂಡಿದ್ದಾರೆ. ಅದರಲ್ಲಿ ನನಗೆ ಅಥವಾ ದಾವಣಗೆರೆ ಜಿಲ್ಲೆಗೆ ಒಂದು ಸಚಿವ ಸ್ಥಾನ ಕೊಡ್ತಾರೆ ಎಂದು ಉತ್ತರ ಮತ ಕ್ಷೇತ್ರದ ಹಿರಿಯ ಶಾಸಕ ಎಸ್.ಎ. ರವೀಂದ್ರನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ ಶಾಸಕರ ಅನುದಾನದಲ್ಲಿ ಜಿಲ್ಲಾಡಳಿತಕ್ಕೆ ಆ್ಯಂಬ್ಯುಲೆನ್ಸ್ ಹಸ್ತಾಂತರ ಮಾಡಿದ ಬಳಿಕ ಮಾತನಾಡಿದ ಅವರು, ಖಾತೆ ಹಂಚಿಕೆ ವೇಳೆ ಅಸಮತೋಲನ ಇದ್ದಿದ್ದೆ. ಇನ್ನೂ ನಾಲ್ಕು ಸೀಟ್ ಗಳನ್ನು ಉಳಿಸಿಕೊಂಡಿದ್ದಾರೆ. ಅ ನಾಲ್ಕು ಸೀಟ್‌ಗಳಲ್ಲಿ ನನಗೂ ಒಂದು ಸ್ಥಾನ ಕೊಟ್ಟರೆ ಒಳ್ಳೆಯದು. ಒಂದು ವೇಳೆ ಕೊಟ್ಟಿಲ್ಲ ಅಂದ್ರೆ ಚಿಂತೆ‌ ಮಾಡುವುದಿಲ್ಲ, ನನ್ನ ಕೆಲಸವನ್ನು ನಾನು ಮಾಡ್ತೇನೆ ಎಂದರು.

ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್

ನನಗೆ ಲಾಬಿ ಮಾಡುವುದಕ್ಕೆ ಬರುವುದಿಲ್ಲ. ಜಿಲ್ಲೆಯಲ್ಲಿ ಐದು ಜನ ಶಾಸಕರಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡಿ ಎಂದು ಐದು‌ ಶಾಸಕರೂ ಕೂಡ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಮಾಡಿದ್ದೆವು ಎಂದು ತಿಳಿಸಿದರು.

ABOUT THE AUTHOR

...view details