ದಾವಣಗೆರೆ:ಡಾಂಬರು ರಸ್ತೆ ಸಂಪೂರ್ಣ ಕಿತ್ತು ಹೋಗಿ ಗುಂಡಿಗಳಾಗಿರುವ ರಸ್ತೆಯನ್ನು ಹೊಸದಾಗಿ ನಿರ್ಮಿಸಬೇಕು ಅಂತ ಇಲ್ಲಿನ ಜನ ರಸ್ತೆಯಲ್ಲಿ ನಾಟಿ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಇದು, ಸ್ಮಾರ್ಟ್ ಸಿಟಿಯ ವಾರ್ಡ್ವೊಂದರ ಮುಖ್ಯರಸ್ತೆ. ಆದ್ರೆ ಇಲ್ಲಿರುವ ಗುಂಡಿಗಳ ಮಧ್ಯೆ ರಸ್ತೆಯಲ್ಲಿದೆ ಎಂದು ಹುಡುಕಲು ಪರದಾಡಬೇಕು. ವಾಹನ ಸವಾರರು ನಿತ್ಯ ಸರ್ಕಸ್ ಮಾಡಬೇಕು. ಸ್ವಲ್ಪ ಯಾಮಾರಿದ್ರು ಯಾವುದಾದರೊಂದು ಗುಂಡಿಯಲ್ಲಿ ಬಿದ್ದು ಆಸ್ಪತ್ರೆಗೆ ಸೇರೋದು ಗ್ಯಾರಂಟಿ. ಹೀಗಾಗಿ ಮನಾ ಬ್ರಿಗೇಡ್, ಜನತಾ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ಗ್ರಾಮಸ್ಥರು, ವಿಶೇಷವಾಗಿ ಯುವಕರೆಲ್ಲರೂ ಸೇರಿ ರಸ್ತೆಯಲ್ಲಿ ನೀರು ತುಂಬಿದ ಗುಂಡಿಗಳ ಬದಿಯಲ್ಲಿ ಕಾರ್ಪೊರೇಟರ್ ಈಜುವ ಸ್ಥಳ, ಇದು ಸಂಸದರು ಈಜುವ ಸ್ಥಳ, ಇದು ಶಾಸಕರು ಈಜುವ ಸ್ಥಳ, ಪಾಲಿಕೆ ಅಧಿಕಾರಿಗಳು ಈಜುವ ಸ್ಥಳ ಎಂಬ ಫಲಕಗಳನ್ನಿಟ್ಟಿದ್ದಾರೆ. ಅಲ್ಲದೆ, ಆ ಗುಂಡಿಗಳಲ್ಲಿ ಸೋಪು, ಶಾಂಪೂ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯಲ್ಲೇ ಭತ್ತ ನಾಟಿ ಮಾಡಿದ್ದಾರೆ.