ಕರ್ನಾಟಕ

karnataka

ETV Bharat / city

ನಮ್ಮ ನಮ್ಮಲ್ಲಿ ಸಂಘರ್ಷ ಒಳ್ಳೆದಲ್ಲ ಎಂದು ಯತ್ನಾಳ್​ಗೆ ಹೇಳಿದ್ದೆ: ರೇಣುಕಾಚಾರ್ಯ - Renuka's statement on BJP disciplinary committee notice

ಯತ್ನಾಳ್ ಅವರಿಗೆ ನೋಟಿಸ್ ನೀಡಿರುವ ಬಗ್ಗೆ ಮಾಹಿತಿ ಇಲ್ಲ. ಅದು ವರಿಷ್ಠರಿಗೆ ಬಿಟ್ಟ ವಿಚಾರ. ಯತ್ನಾಳ್​ ನೀಡಿರುವ ಹೇಳಿಕೆಗಳಿಂದ ಆಗಿರುವ ಲೋಪದೋಷಗಳನ್ನು ಒಂದು ಕುಟುಂಬ ಸದಸ್ಯರಂತೆ ಸರಿಪಡಿಸಿಕೊಂಡು ಒಟ್ಟಾಗಿ ಹೋಗುವಂತೆ ಬಸನಗೌಡ ಅವರಿಗೆ ಬುದ್ಧಿವಾದ ಹೇಳಿದ್ರು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

renukacharya-statement-on-bjp-disciplinary-committee-notice-to-basanagouda-yatnal
ರೇಣುಕಚಾರ್ಯ

By

Published : Feb 13, 2021, 4:53 PM IST

ದಾವಣಗೆರೆ: ನಮ್ಮ ನಮ್ಮಲ್ಲಿ ಘರ್ಷಣೆ ಬೇಡ, ಅದು ಒಳ್ಳೆದಲ್ಲ ಎಂದು ಶಾಸಕ ಯತ್ನಾಳ್​ಗೆ ಮೊದಲೇ ಹೇಳಿದ್ದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಮಾತನಾಡಿದ ಅವರು, ಯತ್ನಾಳ್ ಅವರಿಗೆ ನೋಟಿಸ್ ನೀಡಿರುವ ಬಗ್ಗೆ ಮಾಹಿತಿ ಇಲ್ಲ. ಅದು ವರಿಷ್ಠರಿಗೆ ಬಿಟ್ಟ ವಿಚಾರ. ಯತ್ನಾಳ್​ ನೀಡಿರುವ ಹೇಳಿಕೆಗಳಿಂದ ಆಗಿರುವ ಲೋಪದೋಷಗಳನ್ನು ಒಂದು ಕುಟುಂಬ ಸದಸ್ಯರಂತೆ ಸರಿಪಡಿಸಿಕೊಂಡು ಒಟ್ಟಾಗಿ ಹೋಗುವಂತೆ ಬಸನಗೌಡ ಅವರಿಗೆ ಬುದ್ಧಿವಾದ ಹೇಳಿದ್ರು ಎಂದರು.

ನಮ್ಮ ನಮ್ಮಲ್ಲಿ ಸಂಘರ್ಷ ಒಳ್ಳೆದಲ್ಲ ಎಂದು ಯತ್ನಾಳ್​ಗೆ ಹೇಳಿದ್ದೆ

ಸಿಎಂ ಸಭೆ ನಡೆಸಿ ಮೀಸಲಾತಿ ನಿರ್ಧಾರ ತಿಳಿಸುತ್ತಾರೆ

ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕರು, ಮೀಸಲಾತಿಗಾಗಿ ಬೇರೆ ಸಮುದಾಯಗಳು ಒತ್ತಾಯ ಮಾಡುತ್ತಿವೆ. ಸಿಎಂ ಸಮರ್ಥರಿದ್ದು, ಎಲ್ಲಾ ಮಠಾಧೀಶರೊಂದಿಗೆ ಹಾಗೂ ಕೇಂದ್ರ ನಾಯಕರೊಂದಿಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳುತ್ತಾರೆ. ಮಠಾಧೀಶರು ತಮ್ಮ ಭಕ್ತರ ರಕ್ಷಣೆ ಮಾಡಬೇಕು ಎಂದು ಮೀಸಲಾತಿ ಕೇಳುತ್ತಿದ್ದಾರೆ, ಅದರಲ್ಲಿ ತಪ್ಪೇನಿದೆ. ಕಾನೂನು ತಜ್ಞರೊಂದಿಗೆ ಸಿಎಂ‌ ಚರ್ಚೆ ಆರಂಭಿಸಿದ್ದು, ಒಂದು ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ABOUT THE AUTHOR

...view details