ಕರ್ನಾಟಕ

karnataka

ETV Bharat / city

ನಿಮಯ ಬಾಹಿರವಾಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ, ಮಾಜಿ-ಹಾಲಿ ಶಾಸಕರು ಭಾಗಿ ಆರೋಪ - ಮಾಹಿತಿ ಹಕ್ಕು ಹೋರಾಟಗಾರ ಶೇಖರ್ ನಾಯ್ಕ್

ದಾವಣಗೆರೆ ಜಿಲ್ಲೆ ಮಾಯಕೊಂಡ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಬಸವರಾಜ್ ನಾಯ್ಕ, ಇದೇ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಶಿವಮೂರ್ತಿ ನಾಯ್ಕ ಹಾಗೂ ಹಾಲಿ ಬಿಜೆಪಿ ಶಾಸಕ ಪ್ರೊ.ಲಿಂಗಣ್ಣ ವಿರುದ್ಧ ಅನುದಾನ ದುರ್ಬಳಕೆ ಆರೋಪ ಕೇಳಿಬಂದಿದೆ.

release-illegal-grants-to-educational-institutions-political-leaders
ನಿಮಯ ಬಾಹಿರವಾಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ

By

Published : Dec 29, 2020, 6:00 PM IST

ದಾವಣಗೆರೆ: ಕಾನೂನು ಬಾಹಿರವಾಗಿ ಜನಪ್ರತಿನಿಧಿಗಳು ತಮ್ಮ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ನಿಮಯ ಬಾಹಿರವಾಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಆರೋಪ

ಜಿಲ್ಲೆಯ ರೈತ ಮುಖಂಡ ಹಾಗೂ ಮಾಹಿತಿ ಹಕ್ಕು ಹೋರಾಟಗಾರ ಶೇಖರ್ ನಾಯ್ಕ್ ಈ ಬಗ್ಗೆ ಮಾತನಾಡಿದ್ದಾರೆ.

ಓದಿ: ತಾಯಿ-ಮಗಳಲ್ಲಿ ರೂಪಾಂತರ ಕೊರೊನಾ ವೈರಸ್​ ಪತ್ತೆ : ವಸಂತಪುರ ಅಪಾರ್ಟ್​ಮೆಂಟ್ ಸೀಲ್​ಡೌನ್​

ಇದಕ್ಕೆ ಸಂಬಂಧಿಸಿದಂತೆ ಶೇಖರ್ ನಾಯ್ಕ್ ಅವರು ದಾಖಲೆ ಸಮೇತ ಆರೋಪ ಮಾಡಿದ್ದು, ಕಾಂಗ್ರೆಸ್ ಮಾಜಿ ಶಾಸಕ ಶಿವಮೂರ್ತಿ ನಾಯ್ಕ, ಹಾಲಿ ಬಿಜೆಪಿ ಶಾಸಕ ಪ್ರೊ.ಲಿಂಗಣ್ಣ ಹಾಗು ಮಾಜಿ ಶಾಸಕರ ಶಿಕ್ಷಣ ಸಂಸ್ಥೆಗಳು ಸೇರಿ ಒಟ್ಟು 13 ಸಂಸ್ಥೆಗಳಿಗೆ ನಿಮಯ ಬಾಹಿರವಾಗಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಅನುದಾನ ಬಿಡುಗಡೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಮುಖ ಪಾತ್ರವಹಿಸಿದ್ದಾರೆ. ಯಾವುದೇ ಸಂಸ್ಥೆಯ ಒಡೆತನ ಅವರ ಹೆಸರಿನಲ್ಲಿದ್ದರೆ ಅಥವಾ ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿದ್ದರೆ ಅನುದಾನ ನೀಡುವಂತಿಲ್ಲ. ಆದರೆ ಈ ಮೂರು ಜನರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಲಾಗಿದೆ ಎಂದು ಹೇಳಿದ್ದಾರೆ.

ಶಿಕ್ಷಣ ಸಂಸ್ಥೆಗಳಿಗೆ ಇವರೇ ಅಧ್ಯಕ್ಷರೂ ಹಾಗೂ ಕಾರ್ಯದರ್ಶಿಗಳಾಗಿದ್ದು,‌ ಇವರ ಕುಟುಂಬ ಸದಸ್ಯರು ಶಿಕ್ಷಣ ಸಂಸ್ಥೆಗಳ ನಿರ್ದೇಶಕರು ಆಗಿರುವುದು ಸ್ಪಷ್ಟವಾಗಿದೆ. ಹೀಗಿರುವಾಗ ಸಮಾಜ ಕಲ್ಯಾಣ ಇಲಾಖೆ ಹೇಗೆ ಅನುದಾನ ನೀಡಲು ಸಾಧ್ಯ?. ಹೀಗಾಗಿ,‌ ಶೇಖರ್ ನಾಯ್ಕ್ ದಾಖಲೆಗಳ ಒಂದು ಪ್ರತಿಯನ್ನು ಜಿಲ್ಲಾಡಳಿತಕ್ಕೆ ನೀಡಿ ದೂರು ಸಲ್ಲಿಸಿದ್ದಾರೆ.

ABOUT THE AUTHOR

...view details