ದಾವಣಗೆರೆ: ಕೋಟ್ಯಂತರ ಅಭಿಮಾನಿಗಳನ್ನು ಅಗಲಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್‌ಗೆ ಹಿರಿಯರು ಕಿರಿಯರು ಎನ್ನದೆ ಎಲ್ಲಾ ವಯೋಮಾನದವರು ತಮ್ಮದೇ ಶೈಲಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಚಿತ್ರ ಬಿಡಿಸುವುದು ಕಷ್ಟಸಾಧ್ಯ, ಆದ್ರೆ ನಗರದ ಸಿದ್ದಗಂಗಾ ಶಾಲೆಯ ಮಕ್ಕಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಚಿತ್ರ ಬಿಡಿಸಿ ಅಪ್ಪುವಿಗೆ ವಿಶೇಷ ನಮನ ಸಲ್ಲಿಸಿದ್ದಾರೆ.
ಬ್ಲೈಂಡ್ ಫೋಲ್ಡೆಡ್ ಡ್ರಾಯಿಂಗ್ ಮಾಡಿ ಸಿದ್ದಗಂಗಾ ಶಾಲಾ ಮಕ್ಕಳಿಂದ ಪುನೀತ್‌ಗೆ ವಿಶೇಷ ನಮನ - ಪುನೀತ್ ರಾಜ್‌ಕುಮಾರ್‌ಗೆ ವಿಶೇಷ ಶ್ರದ್ಧಾಂಜಲಿ
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇಹಲೋಕ ತ್ಯಜಿಸಿದ್ದರು ಅವರು ಜನಮಾನಸದಿಂದ ಎಂದಿಗೂ ದೂರವಾಗುವುದಿಲ್ಲ. ಅಪ್ಪು ಅವರ ನಿಧನಕ್ಕೆ ಎಲ್ಲೆಡೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದು, ದಾವಣಗೆರೆ ನಗರದ ಸಿದ್ದಗಂಗಾ ಶಾಲೆಯ ಮಕ್ಕಳು ವಿಶೇಷ ರೀತಿಯಲ್ಲಿ ದೊಡ್ಮನೆ ಹುಡುಗನಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಬ್ಲೈಂಡ್ ಪೋಲ್ಡರ್ ಡ್ರಾಯಿಂಗ್ ಮಾಡಿರುವ ಐವರು ವಿದ್ಯಾರ್ಥಿಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಪ್ಪುಗೆ ವಿಶೇಷ ಗೌರವ ಸಲ್ಲಿಸಿದ್ದಾರೆ. ಅಪ್ಪು ಅಭಿಮಾನವನ್ನು ಮನಸಿನಲ್ಲಿಟ್ಟುಕೊಂಡು ಸಿದ್ದಗಂಗಾ ಶಾಲೆಯ ವಿದ್ಯಾರ್ಥಿಗಳಾದ ವಿನಯ್, ಸ್ಪೂರ್ತಿ, ವರ್ಷ ನಾಯ್ಕ್, ಚಂದನ, ಗಗನ ತಮ್ಮ ಕಲಾಕುಂಚದಲ್ಲಿ ಅಪ್ಪುವಿನ ಭಾವಚಿತ್ರವನ್ನು ಗೋಡೆಯ ಮೇಲೆ ಅರಳಿಸಿದ್ದಾರೆ.
ಮಿಸ್ ಯು ಅಪ್ಪು...
ಮಿಸ್ ಯು ಅಪ್ಪು ಎಂದು ಬರೆದು ಕನ್ನಡ ಬಾವುಟ ಬಿಡಿಸಿ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರವನ್ನು ವಿಶೇಷವಾಗಿ ಬಿಡಿಸಿದ ವಿದ್ಯಾರ್ಥಿಗಳ ಕಲೆಗೆ ಜಿಲ್ಲೆಯಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಚಿತ್ರ ಬಿಡಿಸುವುದು ಅಷ್ಟು ಸುಲಭವಲ್ಲದಿದ್ದರೂ ಕೂಡ ವಿದ್ಯಾರ್ಥಿಗಳು ಚಿತ್ರ ಬಿಡಿಸಿ ದೊಡ್ಮನೆ ಹುಡುಗನಿಗೆ ವಿಶೇಷ ನಮನ ಸಲ್ಲಿಸಿದ್ದಾರೆ. ಚಿತ್ರ ಬಿಡಿಸಿದ ವಿಡಿಯೋಗೆ ಗೊಂಬೆ ಹೇಳುತತೈ ಹಾಡನ್ನು ಜೋಡಿಸಿರುವುದು ಅಪ್ಪು ಅಭಿಮಾನಿಗಳನ್ನು ಆಕರ್ಷಿಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ.