ದಾವಣಗೆರೆ: ಕೊರೊನಾ ವಿರುದ್ಧ ಹೋರಾಡಿದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡದ ಹಿನ್ನೆಲೆ, ಸರ್ಕಾರ ಹಾಗೂ ಜೆಜೆಎಂ ಮೆಡಿಕಲ್ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ವೈದ್ಯಕೀಯ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಜೆಎಂ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳಿಂದ ಪ್ರತಿಭಟನೆ ದಾವಣಗೆರೆ ಜಿಲ್ಲೆಯ ಜೆಜೆಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಂದ ಮತ್ತೆ ಹೋರಾಟ ಶುರುವಾಗಿದೆ. ಶಿಷ್ಯ ವೇತನ ನೀಡದ ಹಿನ್ನೆಲೆ, ವಿದ್ಯಾರ್ಥಿಗಳು ಹೋರಾಟದ ಹಾದಿ ಹಿಡಿದಿದ್ದಾರೆ. ಕ್ಯಾಂಡಲ್ ಹಿಡಿದು ಸರ್ಕಾರ ಹಾಗೂ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವೈದ್ಯಕೀಯ ವಿದ್ಯಾರ್ಥಿಗಳು ಶಿಷ್ಯ ವೇತನ ನೀಡುವಂತೆ ಪಟ್ಟು ಹಿಡಿದರು.
ಇದನ್ನೂ ಓದಿ:ಕೊರೊನಾ ಬಂದ ಬಳಿಕ ಸಿದ್ದರಾಮಯ್ಯ ಹೇಗೇಗೋ ಮಾತಾಡ್ತಾರೆ: ಪಂಚೆ ಬಿಚ್ಚೋದ್ರು ಗೊತ್ತಾಗಲ್ಲ- ಸಚಿವರ ಪಂಚ್
ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸಂದರ್ಭದಲ್ಲಿ ಗೃಹ ವೈದ್ಯರಾಗಿ ಕೆಲಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಒಂದು ವರ್ಷದಿಂದ ಶಿಷ್ಯ ವೇತನ ನೀಡದ ಹಿನ್ನೆಲೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಹೋರಾಟಕ್ಕೆ ಇಳಿದರು. ಶಿಷ್ಯ ವೇತನವನ್ನು ಸರ್ಕಾರವೇ ನೀಡಲಿ ಎಂದು ಕಾಲೇಜು ಅಡಳಿತ ಮಂಡಳಿ ತಿಳಿಸಿದರೆ, ಇತ್ತ ಕಾಲೇಜು ಅಡಳಿತ ಮಂಡಳಿ ಶಿಷ್ಯ ವೇತನ ನೀಡಲಿ ಎಂದು ಸರ್ಕಾರ ಹೇಳುತ್ತಿರುವುದರಿಂದ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ಸರ್ಕಾರ ಹಾಗೂ ಕಾಲೇಜಿನ ಆಡಳಿತ ಮಂಡಳಿಯ ನಡುವಿನ ಮುಸಕಿನ ಗುದ್ದಾಟಕ್ಕೆ ಸಿಲುಕಿರುವ ವೈದ್ಯಕೀಯ ವಿದ್ಯಾರ್ಥಿಗಳು ಶಿಷ್ಯ ವೇತನ ಪಡೆಯಲು ಹರಸಾಹಸ ಪಡುವಂತಾಗಿದೆ.