ಕರ್ನಾಟಕ

karnataka

ETV Bharat / city

ಕೋವಿಡ್​ ವಾರಿಯರ್​ಗಳನ್ನು ಖಾಯಂ ನೇಮಕ ಮಾಡುವಂತೆ ಪ್ರತಿಭಟನೆ - ಆರೋಗ್ಯ ಇಲಾಖೆಯ 6,463 ನೌಕರರನ್ನು ಇಲಾಖೆಯ ಖಾಲಿ ಇರುವ ಹುದ್ದೆಗಳಿಗೆ ನೇಮಿಸುವಂತೆ ಮನವಿ

ಕೊವಿಡ್​ ಉಲ್ಬಣವಾಗಿದ್ದಾಗ ಆರೋಗ್ಯ ಸೇವೆಗೆ ತುರ್ತಾಗಿ ನೇಮಕ ಮಾಡಿಕೊಂಡಿದ್ದವರನ್ನು ಮುಂದುವರೆಸಲಾಗುವುದಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದ್ದು, ಇದಕ್ಕೆ ಆರೋಗ್ಯ ಸಿಬ್ಬಂದಿ ಪ್ರತಿಭಟಿಸಿ ಖಾಯಂ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

covid Warriors
ಕೋವಿಡ್​ ವಾರಿಯರ್​ಗಳನ್ನು ಖಾಯಂ ನೇಮಕ ಮಾಡುವಂತೆ ಪ್ರತಿಭಟನೆ

By

Published : Apr 4, 2022, 5:49 PM IST

ದಾವಣಗೆರೆ:ಕೊವಿಡ್​ ಉಲ್ಭಣವಾದ ಸಂದರ್ಭದಲ್ಲಿ ಪ್ರಾಣವನ್ನು ಒತ್ತೆ ಇಟ್ಟು ಕೊರೊನಾ ವಾರಿರ್ಯಾಸ್ ಆಗಿ ಕೆಲಸ ಮಾಡಿದವರನ್ನು ಜಿಲ್ಲೆ ಆರೋಗ್ಯ ಇಲಾಖೆ ಬಿದೀ ಪಾಲು ಮಾಡಿದೆ. ಇದರಿಂದ ಸಾಕಷ್ಟು ಬೇಸತ್ತ ನೌಕರರು ತಮ್ಮನ್ನು ಕೆಲಸದಿಂದ ಕೈಬಿಡದಂತೆ ಸರ್ಕಾರಕ್ಕೆ ಮನವಿ ಮಾಡಿ ಪ್ರತಿಭಟನೆ ಮಾಡಿದ್ದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ನೌಕರರು ಪಿಪಿಇ ಕಿಟ್ ಧರಿಸಿ ಸರ್ಕಾರ ಹಾಗು ಜಿಲ್ಲಾಡಳಿತ ವಿರುದ್ಧ ಘೋಷಣೆಗಳನ್ನು ಕೋಗಿದರು.

ಎಸಿರವರಿಗೆ ಮನವಿ ಸಲ್ಲಿಸಿದ ಕೋವಿಡ್ -19 ಸಂಧರ್ಭದಲ್ಲಿ ಕೊರೋನಾ ವಾರಿಯರ್‌ಗಳಾಗಿ ನೇಮಕ ಮಾಡಿಕೊಂಡಿರುವ ಆರೋಗ್ಯ ಇಲಾಖೆಯ 6,463 ನೌಕರರನ್ನು ಇಲಾಖೆಯ ಖಾಲಿ ಇರುವ ಹುದ್ದೆಗಳಿಗೆ ನೇಮಿಸಿಕೊಂಡು, ಮುಂದುವರೆಸುವಂತೆ ಕೋರಿದರು.‌

ಕೋವಿಡ್​ ವಾರಿಯರ್​ಗಳನ್ನು ಖಾಯಂ ನೇಮಕ ಮಾಡುವಂತೆ ಪ್ರತಿಭಟನೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಶುಶ್ರೂಷಕರು, ಲ್ಯಾಪ್‌ಟೆಕ್ನಿಷಿಯನ್, ಅರವಳಿಕೆ ತಜ್ಞರು, ಫಾರ್ಮಾಸಿಸ್ಟ್, ಡೇಟಾಎಂಟಿ ಆಪರೇಟರ್, ಕಿರಿಯ ಮಹಿಳಾ/ ಪುರುಷ ಆರೋಗ್ಯ ಸಹಾಯಕರು ಮತ್ತು ಡಿ ಗ್ರೂಪ್ ಹುದ್ದೆಗಳನ್ನು ನೇಮಕ ಮಾಡುವುದಾಗಿ ಮತ್ತು ಹೆಚ್ಚುವರಿ ಹುದ್ದೆಗಳನ್ನು ಸೃಜಿಸಿ ಸರ್ಕಾರದ ವಿವಿಧ ಆದೇಶಗಳ ಮೂಲಕ ಮುಂದಿನ ಖಾಯಂ ನೇಮಕಾತಿ ಆಗುವವರೆಗೂ ನೇಮಕ ಮಾಡಿಕೊಳ್ಳಲಾಗುವುದು ಎಂದು ಭರವಸೆ ನೀಡಲಾಗಿತ್ತು.

ಕೋವಿಡ್​ ವಾರಿಯರ್​ಗಳನ್ನು ಖಾಯಂ ನೇಮಕ ಮಾಡುವಂತೆ ಮನವಿ

ಆದರೆ, ಮಾರ್ಚ್​ 31 ರಂದು ಇಲಾಖೆಯಲ್ಲಿ ಮುಂದುವರೆಸಲು ಆಗುವುದಿಲ್ಲ ಎಂದು ಆದೇಶ ಬಂದಿದ್ದು, ಈ ಆದೇಶವನ್ನು ವಿರೋಧಿಸಿ ಪ್ರತಿಭಟನೆ ಮಾಡಿದರು.

ಇದನ್ನೂ ಓದಿ:ಅನುಮತಿ ಇಲ್ಲದೇ ಸಾರ್ವಜನಿಕರ‌ ಮೊಬೈಲ್‌ ಕಸಿದುಕೊಳ್ಳಬೇಡಿ.. ಕಮಿಷನರ್ ಪಂತ್‌​ ಟ್ವೀಟ್​

ABOUT THE AUTHOR

...view details