ದಾವಣಗೆರೆ: ಇದೇ ತಿಂಗಳ 20ರೊಳಗೆ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿಯನ್ನು ನೀಡಬೇಕು. ಒಂದು ವೇಳೆ ನಾನು ಹೋರಾಟದ ನಿರ್ಧಾರ ಪ್ರಕಟಿಸಿದ್ರೆ, ಒಂದೋ ನಾನಿರಬೇಕು, ಇಲ್ಲ ನೀವು ಇರಬೇಕು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರಕ್ಕೆ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಖಡಕ್ ಎಚ್ಚರಿಕೆ ರವಾನಿಸಿದರು.
ವಾಲ್ಮೀಕಿ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿರುವುದು. ಜಿಲ್ಲೆಯ ಹರಿಹರದ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಕಳೆದ ದಿನ ನಡೆದಂತಹ ಕಾರ್ಯಕ್ರಮದಲ್ಲಿ ಸರ್ಕಾರಕ್ಕೆ ಶ್ರೀಗಳು ಎಚ್ಚರಿಕೆ ನೀಡಿದರು. ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಕೊನೆಯ ಅಸ್ತ್ರವಾಗಿ 'ಡು ಆರ್ ಡೈ' ಎಂಬ ಮಾತನ್ನು ಹೇಳಿದ್ರು. ಹೋರಾಟದ ಅಂತಿಮ ನಿರ್ಧಾರ ಪ್ರಕಟಿಸುವುದರೊಳಗೆ ಸಮುದಾಯಕ್ಕೆ ಮೀಸಲಾತಿ ಸಂದೇಶ ಕೊಟ್ಟರೆ ಕೃತಜ್ಞತೆ ಸಲ್ಲಿಸುತ್ತೇವೆ. ಇಲ್ಲವಾದರೆ ನಮ್ಮ ನಿರ್ಧಾರ ಪ್ರಕಟ ಮಾಡುತ್ತೇವೆ ಎಂದು ಜನ ಜಾಗೃತಿಗಾಗಿ ಜನ ಸ್ಪಂದನ ಕಾರ್ಯಗಾರದಲ್ಲಿ ಸರ್ಕಾರಕ್ಕೆ ವಾಲ್ಮೀಕಿ ಪೀಠದ ಸ್ವಾಮೀಜಿ ಹೇಳಿದ್ರು.
ಇಡೀ ರಾಜ್ಯದ ನಾಯಕರು ಎದ್ದರೆ ನಮ್ಮನ್ನು ಎದುರಿಸಬೇಕಾಗುತ್ತದೆ:
ಅಕ್ಟೋಬರ್ 20ಕ್ಕೆ ವಾಲ್ಮೀಕಿ ಜಯಂತಿ ಇದ್ದು, ಇಡೀ ರಾಜ್ಯದ ನಾಯಕರು ಎದ್ದರೆ ನಮ್ಮನ್ನು ಎದುರಿಸಬೇಕಾಗುತ್ತದೆ. ನಮ್ಮ ಸಹನೆಗೂ ಒಂದು ಮಿತಿಯಿದೆ. ನಾವು ತಳ್ಳಿದರೆ ನೀವು ಎಲ್ಲಿ ಬೀಳುತ್ತೀರೋ ಗೊತ್ತಿಲ್ಲ. ಇಡೀ ನಾಯಕ ಸಮುದಾಯ ಹೋರಾಟಕ್ಕೆ ಧುಮುಕಿದ್ರೆ ಏನಾಗುತ್ತೆ ನೋಡಿ. ದೇಶದ ಮುಂದುವರೆದ ಸಮುದಾಯಕ್ಕೆ ಶೇಕಡ 10ರಷ್ಟು ಮೀಸಲಾತಿ ಕೊಟ್ಟಿದ್ದೀರ. ಏಕೆ, ಅವರೇನು ಮೇಲಿಂದ ಇಳಿದು ಬಂದಿದ್ದಾರಾ?. ನಾವು ಮತ್ತೆ ಹೋರಾಟ ಕೈಗೆತ್ತಿಕೊಂಡರೆ ನೀವು ಯಾವ ಗತಿ ಸೇರುತ್ತೀರೋ ಗೊತ್ತಿಲ್ಲ. ನಮ್ಮ ತಾಳ್ಮೆ ಪರೀಕ್ಷೆ ಮಾಡದೇ ಮೀಸಲಾತಿ ನಿರ್ಧಾರ ಕೈಗೊಳ್ಳಿ. ಉದ್ಯೋಗ ಮತ್ತು ಶೈಕ್ಷಣಿಕವಾಗಿ ಮಕ್ಕಳಿಗೆ ಸಾಮಾಜಿಕ ನ್ಯಾಯ ನೀಡಿ ಎಂದು ಆಗ್ರಹಿಸಿದರು.
ಇದನ್ನೂ ಓದಿ:ಕಲುಷಿತ ನೀರು ಕುಡಿದು 6 ಮಂದಿ ಸಾವು ಪ್ರಕರಣ.. ಮನೀಶ್ ಮೌದ್ಗಿಲ್ ನೇತೃತ್ವದಲ್ಲಿ ತನಿಖೆಗೆ ಸಿಎಂ ಸೂಚನೆ
ಈ ವೇಳೆ ನಾಯಕ ಸಮುದಾಯದ ಶಾಸಕರಾದ ಜಗಳೂರು ಕ್ಷೇತ್ರದ ಶಾಸಕ ರಾಮಚಂದ್ರ, ಮಸ್ಕಿ ಕ್ಷೇತ್ರದ ಶಾಸಕ ಬಸವನಗೌಡ ತುರುವಿಹಾಳ ಹಾಗು ಹೆಚ್ಡಿ ಕೋಟೆ ಶಾಸಕ ಅನೀಲ್ ಚಿಕ್ಕಮಾದು, ರಾಯಚೂರು ಗ್ರಾಮಾಂತರ ಶಾಸಕ ಬಸವನಗೌಡ ದದ್ದಲ್, ಸಿರಗುಪ್ಪ ಶಾಸಕ ಸೋಮಲಿಂಗಪ್ಪ ಬಳ್ಳಾರಿ ಸಂಸದ ದೇವೆಂದ್ರಪ್ಪ ಸೇರಿ ಅನೇಕ ಶಾಸಕರು ಸಮುದಾಯದ ಮುಖಂಡರ ಸಮ್ಮುಖದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿಯವರಿಗೆ ಸವಾಲ್ ಹಾಕಿದರು.