ಕರ್ನಾಟಕ

karnataka

ETV Bharat / city

ಡಿಜೆ ಸೌಂಡ್ ಸಿಸ್ಟಮ್​ ಅಳವಡಿಸಲು ಗಣೇಶ ಸಮಿತಿಯವರು ಅನುಮತಿ ಪಡೆಯಬೇಡಿ.. ಮುತಾಲಿಕ್ - ಈಟಿವಿ ಭಾರತ್​ ಕರ್ನಾಟಕ

ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿರುವುದು ಸ್ವಾಗತಾರ್ಹ. ಅದೇ ರೀತಿ ಗಣೇಶೋತ್ಸಕ್ಕೂ ಅವಕಾಶ ಮಾಡಿಕೊಡಬೇಕು ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

Pramod Muthalik
ಪ್ರಮೋದ್ ಮುತಾಲಿಕ್

By

Published : Aug 13, 2022, 5:31 PM IST

ದಾವಣಗೆರೆ :ಡಿಜೆ ಸೌಂಡ್ ಸಿಸ್ಟಮ್ ಅಳವಡಿಸಲು ಅನುಮತಿ ಪಡೆಯಬೇಡಿ, ಡಬಲ್ ಸೌಂಡ್ ಹಚ್ಚಿ ಏನ್ ಮಾಡ್ತಾರೆ ನೋಡೋಣ. ಸುಪ್ರೀಂ ಕೋರ್ಟ್ ಹೆಸರು ಹೇಳ್ತಾ ನಮ್ಮನ್ನು ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗಣೇಶ ಮಂಡಳಿಗಳಿಗೆ ಕರೆ ನೀಡಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಸೌಂಡ್ ಸಿಸ್ಟಮ್​ಗೆ ಪರ್ಮಿಷನ್ ತೆಗೆದುಕೊಳ್ಳುವುದಿಲ್ಲ. ಸರ್ಕಾರ ಮೊದಲು ಮಸೀದಿಗಳು ಲೌಡ್ ಸ್ಪೀಕರ್​ಗೆ ಅನುಮತಿ ಪಡೆದಿರುವುದನ್ನು ತೋರಿಸಲಿ. ಬಳಿಕ ನಾವು ಡಿಜೆ ಅನುಮತಿ ಪಡೆಯುತ್ತೇವೆ. ನಮ್ಮ ಸೌಂಡ್ ಸಿಸ್ಟಂ ನಿಲ್ಲಿಸಲು ನಿಮಗೆ ಹಕ್ಕಿಲ್ಲ. ಸಾರ್ವಜನಿಕ ಗಣೇಶೋತ್ಸವಕ್ಕೆ ನಿರ್ಭಂಧಗಳನ್ನು ಹೇರಿ ಸ್ವಾತಂತ್ರ್ಯ ಹರಣ ಮಾಡಬೇಡಿ ಎಂದರು.

ಡಿಜೆ ಸೌಂಡ್ ಸಿಸ್ಟಮ್​ ಅಳವಡಿಸಲು ಗಣೇಶ ಸಮಿತಿಯವರು ಅನುಮತಿ ಪಡೆಯಬೇಡಿ- ಪ್ರಮೋದ್ ಮುತಾಲಿಕ್

ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ಆಚರಣೆ ಸ್ವಾಗತಾರ್ಹ :ಈದ್ಗಾ ಮೈದಾನವನ್ನು ಕೆಲವು ಕೋಮಿನವನ್ನು ತಮ್ಮದು ಎಂದು ಹೇಳಿಕೊಳ್ಳುತ್ತಿದ್ದರು, ಈ ವಿವಾದಕ್ಕೆ ತೆರೆ ಬಿದ್ದಿದೆ. ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿರುವುದು ಸ್ವಾಗತಾರ್ಹ. ಅದೇ ರೀತಿ ಗಣೇಶೋತ್ಸಕ್ಕೂ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ವಕ್ಫ್ ಉಪಾಧ್ಯಕ್ಷನಾಗಿ ನೇಮಕಕ್ಕೆ ವಿರೋಧ :ಪರೇಶ್ ಮೆಸ್ತಾ ಕೊಲೆ ಮಾಡಿದ ಎ1 ಆರೋಪಿ ಅಣ್ಣಿಗೇರಿ ಎಂಬುವರನ್ನು ವಕ್ಫ್ ಬೋರ್ಡ್​ನ ಉಪಾಧ್ಯಕ್ಷನಾಗಿ ಬಿಜೆಪಿ ಸರ್ಕಾರ ನೇಮಕ ಮಾಡಿರುವುದು ನಾಚಿಗೇಡಿನ ಸಂಗತಿ. ಒಬ್ಬ ಕೊಲೆಗಡುಕ, ಕ್ರಿಮಿನಲ್​ಗೆ ಉಪಾಧ್ಯಕ್ಷನ ಸ್ಥಾನ ನೀಡುವುದು ಎಷ್ಟು ಸರಿ ಎಂದು ಸರ್ಕಾರಕ್ಕೆ ಪ್ರಶ್ನಿಸಿದರು.

ಇದನ್ನೂ ಓದಿ :ಸ್ವಾತಂತ್ರ್ಯ ದಿನಾಚರಣೆ: ಚಾಮರಾಜಪೇಟೆ ಮೈದಾನದ ಸುತ್ತ ಪೊಲೀಸ್ ಕಟ್ಟೆಚ್ಚರ

ABOUT THE AUTHOR

...view details