ಕರ್ನಾಟಕ

karnataka

ETV Bharat / city

ಕಾರ್ನಾಡ್ ನಿಧನಕ್ಕೆ ರಾಜಕೀಯ ನಾಯಕರು, ರಂಗಭೂವಿ ಕಲಾವಿದರಿಂದ ಸಂತಾಪ - undefined

ಇಂದು ಜ್ಞಾನಪೀಠ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರು ನಿಧನ ಹೊಂದಿದ್ದು, ಅವರಿಗೆ ರಾಜಕೀಯ ವ್ಯಕ್ತಿಗಳು, ರಂಗ ಭೂವಿ ಕಲಾವಿದರು ಸಂತಾಪ ಸೂಚಿಸಿದ್ದಾರೆ.

ಬೆಂಗಳೂರು

By

Published : Jun 10, 2019, 5:49 PM IST

Updated : Jun 10, 2019, 6:01 PM IST

ಬೆಂಗಳೂರು/ರಾಯಚೂರು/ದಾವಣಗೆರೆ :ಬಹುಮುಖ ಪ್ರತಿಭೆಯ ಗಿರೀಶ್​ ಕಾರ್ನಾಡ್​, ದೇಶ ಹಾಗೂ ರಾಜ್ಯಕ್ಕೆ ಹಲವು ಕೊಡುಗೆಗಳನ್ನ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು ಕಾರ್ನಾಡ್ ಸಿನಿಮಾ ನಾಟಕದಲ್ಲಿ ಹಲವಾರು ಸೇವೆ ಸಲ್ಲಿಸಿದ್ದರು. ಅವರು ವಿಚಾರವಾದಿ, ಬುದ್ದಿಜೀವಿ, ಚಿಂತಕರಾಗಿದ್ದರು. ಸಮಾಜದ ಬದಲಾವಣೆ ತರಬೇಕು ಅಂತ ಹೋರಾಟ ಮಾಡಿದ್ದರು. ಇವರ ಹೋರಾಟವನ್ನು ಹಲವರು ವಿರೋಧ ಮಾಡಿದ್ರು. ಅದನ್ನು ಅವರು ಧೈರ್ಯದಿಂದ ಎದುರಿಸಿದ್ರು. ಸೃಜನಶೀಲ ಸಮಾಜ ನಿರ್ಮಾಣ ಮಾಡುವಲ್ಲಿ ಅವರ ಪಾತ್ರ ತುಂಬಾ ದೊಡ್ಡದು. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರುತ್ತೇನೆ ಎಂದರು

ಗಿರೀಶ್ ಕಾರ್ನಾಡ್ ನಿಧನಕ್ಕೆ ಸಂತಾಪ ಸೂಚಿಸಿದ ರಾಜಕೀಯ ವ್ಯಕ್ತಿಗಳು,ರಂಗ ಭೂವಿ ಕಲಾವಿದರು

ಗಿರೀಶ್ ಕಾರ್ನಾಡ್ ನಿಧನಕ್ಕೆ ಸಂತಾಪ ಸೂಚಿಸಿದ ಸಚಿವ ವೆಂಕಟರಾವ್ ನಾಡಗೌಡ

ಜ್ಞಾನಪೀಠ ಪುರಸ್ಕೃತ ಗಿರೀಶ್ ಕಾರ್ನಾಡ್ ಅಗಲಿಕೆಗೆ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಸಂತಾಪ ಸೂಚಿಸಿದ್ದಾರೆ.

ವೆಂಕಟರಾವ್ ನಾಡಗೌಡ

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕರೆಗುಡ್ಡ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಿರೀಶ್ ಕಾರ್ನಾಡ್​‌ನಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ. ಅವರು ಸಾಹಿತ್ಯ, ಕವಿಗಳು, ಕತೆ, ಸಿನಿಮಾ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು, ಜ್ಞಾನಪೀಠ ಸೇರಿದಂತೆ ಹಲವು ಪ್ರಶಸ್ತಿಗಳು ಪಡೆದುಕೊಂಡಿದ್ದಾರೆ. ಅಂತಹ ಖ್ಯಾತ ವ್ಯಕ್ತಿಯನ್ನ ಇಂದು ನಾವು ಕಳೆದುಕೊಂಡಿರುವುದು ತುಂಬಲಾರದ ನಷ್ಟವಾಗಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ರು.

ನುಡಿದಂತೆ ನಡೆದಿದ್ದ ಕಾನಾರ್ಡ್ ಅಗಲಿಕೆ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ: ನಾಗಾಭರಣ ಅಭಿಮತ

ಹಿರಿಯ ಸಾಹಿತಿ, ನಾಟಕಕಾರ‌ ಹಾಗೂ ಉತ್ತಮ‌ ಕಲಾವಿದರಾಗಿದ್ದ ಗಿರೀಶ್ ಕಾರ್ನಾಡ್​ ಅವರ ನಿಧನ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ನಷ್ಟವಾಗಿದೆ ಎಂದು ಹಿರಿಯ ನಿರ್ದೇಶಕ ನಾಗಾಭರಣ ಅಭಿಪ್ರಾಯಪಟ್ಟಿದ್ದಾರೆ.

ಕಾನಾರ್ಡ್ ಅಂತಿಮ ದರ್ಶನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗುರು ತನ್ನ ಶಿಷ್ಯನನ್ನು ಹೇಗೆಲ್ಲಾ ಶಿಷ್ಯವೃತಿಯಿಂದ ವೃತಿಯ ಕಡೆ ಕರೆದುಕೊಂಡು ಹೋಗ್ತಾನೆ ಅನ್ನುವಂತಹದನ್ನು ಗಿರೀಶ್ ಕಾರ್ನಾಡ್ ತಿಳಿಸಿಕೊಟ್ಟಿದ್ದರು ಎಂದು ಸ್ಮರಿಸಿದರು.

ಬರೆಯುವಾಗಲೇ ನನ್ನ ಸಾವು ಬರಲಿ ಎಂದು ಕಾರ್ನಾಡ್ ಬಯಸಿದ್ದರು: ಸುರೇಶ್ ಹೆಬ್ಳೀಕರ್

ಗಿರೀಶ್ ಕಾರ್ನಾಡ್ ಸಾವಿನ ಸುದ್ದಿಯಿಂದ ಬೇಸರವಾಗಿದೆ. ಬರೆಯುವಾಗಲೇ ನನ್ನ ಸಾವು ಬರಲಿ ಎಂದು ಕಾರ್ನಾಡ್ ಬಯಸಿದ್ದರು ಎಂದು ಅವರ ಮಾತನ್ನು ಸ್ಮರಿಸಿದರು.ಅಂತಿಮ ನಮನ ಸಲ್ಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಯುವಕರು ಕಾರ್ನಾರ್ಡ್​ರ ಧೈರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನು ಕಲಿಯಬೇಕು. ಅವರು ಚಲನಚಿತ್ರವೆಂದರೆ ಕೇವಲ ಮನರಂಜನೆ ಅಲ್ಲ. ಅದರಲ್ಲಿ ಒಂದು ಸಂದೇಶವನ್ನು ನೀಡುತ್ತಿದ್ದರು. ಅವರ ಸರಳತೆ ಬಗ್ಗೆ ಮಾತನಾಡುತ್ತಾ ಅವರು ಸರಳಜೀವಿ ಸಾವಿನಲ್ಲೂ ಸರಳತೆ ಮೆರೆದ ಸಾಕಷ್ಟು ಜನರಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.

ಗಿರೀಶ್ ಕಾರ್ನಾಡ್ ನಿಧನಕ್ಕೆ ಸಂತಾಪ ಸೂಚಿಸಿದ ಕೂಡಲ ಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ

ಗಿರೀಶ್ ಕಾರ್ನಾಡ್ ಸಾವು ನಮಗೆ ನೋವು ತಂದಿದೆ. ಪ್ರಗತಿಪರ ಚಿಂತಕರು, ಸಾಹಿತಿಗಳು, ಬರಹಗಾರರು ಆಗಿದ್ದವರು. ತಾನು ನಂಬಿದ್ದ ತತ್ವ ಸಿದ್ಧಾಂತದಿಂದ ಬದುಕು ಕಟ್ಟಿಕೊಂಡವರು. ಇವರ ಸಾವು ಸಾಹಿತ್ಯ ಲೋಕಕ್ಕೆ ತುಂಬಲಾರದ ನಂಷ್ಟವಾಗಿದೆ ಎಂದರು.

ಕೂಡಲ ಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ

ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮನುಷ್ಯ ವಿರೋಧಿ ಚಟುವಟಿಕೆ ನಡೆದಾಗ ದನಿ ಎತ್ತುತ್ತಿದ್ದರು. ಅನೇಕ ಪುಸ್ತಕ, ಲೇಖನ, ನಾಟಕ ಬರೆದು ಸಾಹಿತ್ಯ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಅವರಿಗೆ ಲಿಂಗಾಯತ ಸಮುದಾಯ, ಬಸವ ಬಳಗ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತದೆ ಎಂದರು.

Last Updated : Jun 10, 2019, 6:01 PM IST

For All Latest Updates

TAGGED:

ABOUT THE AUTHOR

...view details