ಕರ್ನಾಟಕ

karnataka

ETV Bharat / city

ಗ್ರಾಮ ಸ್ವರಾಜ್​ ಸಮಾವೇಶದಲ್ಲಿ ಸಾಮಾಜಿಕ ಅಂತರ ಮರೆತ ಜನಪ್ರತಿನಿಧಿಗಳು - ದಾವಣಗೆರೆ ಗ್ರಾಮ ಸ್ವರಾಜ್ಯ ಸಮಾವೇಶ

ದಾವಣಗೆರೆಯ ಜಿಎಂಐಟಿ ಕಾಲೇಜು ಆವರಣದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ ಗ್ರಾಮ ಸ್ವರಾಜ್​ ಕಾರ್ಯಕ್ರಮದಲ್ಲಿ ಕೊರೊನಾ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದು ಕಂಡು ಬಂತು.

ಗ್ರಾಮ ಸ್ವರಾಜ್ಯ ಸಮಾವೇಶ
ಗ್ರಾಮ ಸ್ವರಾಜ್ಯ ಸಮಾವೇಶ

By

Published : Dec 4, 2020, 5:04 PM IST

ದಾವಣಗೆರೆ: ಜನಸಾಮಾನ್ಯರು ಮಾಡುವ ಕಾರ್ಯಕ್ರಮಗಳಿಗೆ ಕೊರೊನಾ ನಿಯಮಾವಳಿಗಳನ್ನು ಹೇರಲಾಗಿದ್ದು, ಜನಪ್ರತಿನಿಧಿಗಳಿಗೆ ಇದು ಅನ್ವಯಿಸುವುದಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಇಂದು ದಾವಣಗೆರೆಯ ಜಿಎಂಐಟಿ ಕಾಲೇಜು ಆವರಣದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ ಗ್ರಾಮ ಸ್ವರಾಜ್​ ಕಾರ್ಯಕ್ರಮದಲ್ಲಿ ಕೊರೊನಾ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದು ಕಂಡು ಬಂತು. ಕಾರ್ಯಕ್ರಮಕ್ಕೆ ಭಾಗಿಯಾಗಿದ್ದ ಪಕ್ಷದ ಕಾರ್ಯಕರ್ತರು ಸಾಮಾಜಿಕ ಅಂತರ ಮರೆತು ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ ದೃಶ್ಯ ಕಂಡು ಬಂದಿತು‌‌.

ದಾವಣಗೆರೆಯಲ್ಲಿ ಗ್ರಾಮ ಸ್ವರಾಜ್​ ಸಮಾವೇಶ

ಇನ್ನು ವೇದಿಕೆ ಮೇಲಿದ್ದ ಪಂಚಾಯತ್ ರಾಜ್ ಇಲಾಖೆ ಸಚಿವ ಈಶ್ವರಪ್ಪ, ಸಂಸದ ಸಿದ್ದೇಶ್ವರ್ ಹಾಗೂ ಜಿಲ್ಲೆಯ ಶಾಸಕರು, ಕಾಂಗ್ರೆಸ್ ಪಕ್ಷದ ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನು ಹಾಗೂ ಅವರ ಬೆಂಬಲಿಗರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ವೇಳೆ ಸಹ ಸಾಮಾಜಿಕ ಅಂತರ ಅನುಸರಿಸಿದ್ದು ಕಂಡು ಬರಲಿಲ್ಲ. ಇದರಿಂದಾಗಿ ಜನಸಾಮಾನ್ಯರಿಗೊಂದು ನ್ಯಾಯ, ಜನಪ್ರತಿನಿಧಿಗಳಿಗೊಂದು ನ್ಯಾಯ, ಸಾಮಾನ್ಯರಿಗೆ ಅನ್ವಯಿಸುವ ಕೊರೊನಾ ನಿಯಮಾವಳಿಗಳು ರಾಜಕೀಯ ನಾಯಕರಿಗೆ ಅನ್ವಯಿಸುವುದಿಲ್ಲವೆ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ABOUT THE AUTHOR

...view details