ಕರ್ನಾಟಕ

karnataka

ETV Bharat / city

ಲೇಟ್ ನೈಟ್ ಪಾರ್ಟಿ: ದಾವಣಗೆರೆಯ ಹೋಟೆಲ್​​ ಮೇಲೆ ಪೊಲೀಸರಿಂದ ದಾಳಿ - ದಾವಣಗೆರೆ ಪೊಲೀಸರು ದಾಳಿ

ತಡರಾತ್ರಿ 2 ಗಂಟೆವರೆಗೂ ಡಿಜೆ ಸೌಂಡ್ ಹಾಕಿ ಪಾರ್ಟಿ ಮಾಡುತ್ತಿದ್ದ ಹೋಟೆಲ್ ಮೇಲೆ ದಾವಣಗೆರೆ ಪೊಲೀಸರು ದಾಳಿ ನಡೆಸಿದ್ದಾರೆ.

police ride on late night party hotel
ದಾವಣಗೆರೆಯ ಹೋಟೆಲ್​​ ಮೇಲೆ ಪೊಲೀಸರ ದಾಳಿ

By

Published : Aug 7, 2022, 1:45 PM IST

ದಾವಣಗೆರೆ:ಯುವಕ-ಯುವತಿಯರು ಸೇರಿ ತಡ ರಾತ್ರಿಯವರೆಗೂ ಪಾರ್ಟಿ ಮಾಡುತ್ತಿದ್ದ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಜಿಲ್ಲೆಯ ಮಿಟ್ಲಕಟ್ಟೆ ಗ್ರಾಮದಲ್ಲಿರುವ 'ದಿ ಸ್ಟೇಜ್' ಮೇಲೆ ದಾಳಿ ನಡೆದಿದೆ.

ದಾವಣಗೆರೆಯ ಹೋಟೆಲ್​​ ಮೇಲೆ ಪೊಲೀಸರ ದಾಳಿ

ಯುವಕ-ಯುವತಿಯರು ಡಿಜೆ ಸೌಂಡ್ ಹಾಕಿ ಕುಣಿಯುತಿದ್ದರು. ಇದರಿಂದ ಬೇಸತ್ತ ಸಾರ್ವಜನಿಕರು ಕೆಆರ್​ಎಸ್ ಪಾರ್ಟಿಗೆ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ) ದೂರು ನೀಡಿದ್ದರು. ಇದರ ಬೆನ್ನಲ್ಲೇ ತಡ ರಾತ್ರಿ ಕೆಆರ್​ಎಸ್ ಪಾರ್ಟಿಯ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೋಟೆಲ್‌ ಮೇಲೆ ದಾಳಿಯಾಗುತಿದ್ದಂತೆ ಯುವಕ ಯುವತಿಯರು ಅಲ್ಲಿಂದ ತೆರಳಿದ್ದಾರೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾತ್ರಿ 10 ರಿಂದ 11 ಗಂಟೆಗೆ ಪ್ರತಿ ಹೋಟೆಲ್ ಬಂದ್ ಮಾಡಬೇಕೆಂಬ ನಿಯಮವಿದೆ. ಆದರೂ ಕೂಡ ಜಿಲ್ಲೆಯಲ್ಲಿ ಪ್ರತಿ ಶನಿವಾರ ದಿನದಂದು ಈ ರೀತಿಯ ಅನಧಿಕೃತ ಪಾರ್ಟಿಗಳು ನಡೆಯುವುದು ಸರ್ವೇ ಸಾಮಾನ್ಯವಾಗಿದೆ.

ಇದನ್ನೂ ಓದಿ:ಬಳ್ಳಾರಿ: ಕಲುಷಿತ ನೀರು ಸೇವನೆ, 84 ಮಂದಿ ಆಸ್ಪತ್ರೆಗೆ ದಾಖಲು

ABOUT THE AUTHOR

...view details