ದಾವಣಗೆರೆ: ಕೊರೊನಾ ವೈರಸ್ನಿಂದ ಭಾರತ ಅಂಧಕಾರಕ್ಕೆ ಸಿಲುಕಿದೆ. ಏಪ್ರಿಲ್ 5ರಂದು 9 ಗಂಟೆಗೆ 9 ನಿಮಿಷಗಳ ಕಾಲ ದೀಪ, ಟಾರ್ಚ್, ಮೇಣದ ಬತ್ತಿ ಹಚ್ಚುವ ಮೂಲಕ ಅಂಧಕಾರವನ್ನು ಓಡಿಸೋಣ ಎಂದು ಪ್ರಧಾನಿ ಮೋದಿ ಕರೆ ಕೊಟ್ಟಿದ್ದಾರೆ.
ರೇವಣ್ಣರಿಗೆ ಅಂಚೆ ಮೂಲಕ ಮೇಣದ ಬತ್ತಿ ಕಳುಹಿಸಿದ ಬಿಜೆಪಿ ಕಾರ್ಯಕರ್ತರು - On 5th April, at 9 pm, for 9 minutes, light up candles'
ಹೊಳೆನರಸೀಪುರದ ರೇವಣ್ಣ ಅವರ ನಿವಾಸಕ್ಕೆ ಬಿಜೆಪಿಯ ದಕ್ಷಿಣ ಯುವ ಮೋರ್ಚಾದಿಂದ ಮೇಣದ ಬತ್ತಿಗಳನ್ನು ನಗರದ ಅಂಚೆ ಮೂಲಕ ಕಳುಹಿಸಿಕೊಟ್ಟರು.
ರೇವಣ್ಣರಿಗೆ ಮೇಣದ ಬತ್ತಿ ಪೋಸ್ಟ್ ಮಾಡಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು
ದೀಪ ಪ್ರಜ್ವಲನ ಕುರಿತು ಟೀಕಿಸಿದ್ದ ಶಾಸಕ ಹೆಚ್.ಡಿ.ರೇವಣ್ಣ ಅವರಿಗೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮೇಣದ ಬತ್ತಿಗಳನ್ನು ಅಂಚೆ ಮೂಲಕ ಕಳುಹಿಸಿಕೊಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೇಣದ ಬತ್ತಿಗಳನ್ನು ಏಪ್ರಿಲ್ 5ರಂದು 9 ಗಂಟೆಗೆ ಹಚ್ಚಿ. ಹೊರ ಹೋಗುವ ಪ್ರಮೇಯವೇ ಬರುವುದಿಲ್ಲ ಎಂದು ರೇವಣ್ಣ ಅವರ ಟೀಕೆಗೆ ಬಿಜೆಪಿ ಕಾರ್ಯಕರ್ತರು ಪ್ರತ್ಯತ್ತರ ನೀಡಿದ್ದಾರೆ.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶವ್ಯಾಪಿ ಲಾಕ್ಡೌನ್ ಜಾರಿಗೆ ತರಲಾಗಿದೆ. ಮೇಣದ ಬತ್ತಿ ತರಲು ಹೊರಗೆ ಹೋದರೆ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಾರೆ ಎಂದು ಹೆಚ್.ಡಿ.ರೇವಣ್ಣ ಟೀಕಿಸಿದ್ದರು.