ದಾವಣಗೆರೆ: ಅಳಿವಿನಂಚಿನಲ್ಲಿರುವ ವನ್ಯಜೀವಿ ಅಪರೂಪದ ಚಿಪ್ಪು ಹಂದಿ(ಪೆಂಗೋಲಿನ್) ಚಿಪ್ಪು ಮಾರಾಟ ಮಾಡುತ್ತಿದ್ದ 18 ಮಂದಿ ಅಂತರ್ ಜಿಲ್ಲಾ ಮಾರಾಟಗಾರರನ್ನು ಸಿಇಎನ್ ಠಾಣಾ ಪೊಲೀಸರು (ಸೈಬರ್, ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯ ನಿಗ್ರಹ) ಬಂಧಿಸಿದ್ದಾರೆ.
ಪಂಗೋಲಿನ್ ಚಿಪ್ಪು ಮಾರಾಟ: 18 ಮಂದಿ ಅಂತರ್ ಜಿಲ್ಲಾ ಮಾರಾಟಗಾರರ ಬಂಧನ - ದಾವಣಗೆರೆ
ಪಂಗೋಲಿನ್ ಚಿಪ್ಪು ಮಾರಾಟ ಮಾಡುತ್ತಿದ್ದ 18 ಮಂದಿ ಅಂತರ್ ಜಿಲ್ಲಾ ಮಾರಾಟಗಾರರನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಹರಿಹರ- ಶಿವಮೊಗ್ಗ ರಸ್ತೆಯ ಇಕ್ಕೆಲದಲ್ಲಿ ಚಿಪ್ಪು ಹಂದಿ ಚಿಪ್ಪುಗಳನ್ನು ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಇಎನ್ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ. ಡಿವೈಎಸ್ಪಿ ಬಸವರಾಜು ನೇತೃತ್ವದಲ್ಲಿ ಸಿಇಎನ್ ಠಾಣೆಯ ಪೊಲೀಸ್ ನಿರೀಕ್ಷಕ ಗಿರೀಶ್ ಹಾಗು ತಂಡ ದಾವಣಗೆರೆ ಜಿಲ್ಲೆಯ ಹರಿಹರದ ಬಳಿ ಇರುವ ಶಿವಬಸವ ಡಾಬ ಬಳಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಸದ್ಯ ಬಂಧಿತರಿಂದ 67 ಕೆ.ಜಿ 700 ಗ್ರಾಂ ಪೆಂಗೋಲಿನ್ ಚಿಪ್ಪು ಕೃತ್ಯಕ್ಕೆ ಬಳಸಿದ್ದ ಎರಡು ಓಮಿನಿ, ಒಂದು ಕಾರು ಸೇರಿ ಒಟ್ಟು ಮೂರು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಸಿಇಎನ್ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.