ದಾವಣಗೆರೆ :ಮನೆಗೆ ಕನ್ನ ಹಾಕಲು ಬಂದ ಮೂವರು ಕಳ್ಳರು, ಮನೆ ಮಾಲೀಕ ಎಚ್ಚರಿಗೊಂಡು ಕೂಗಿದ್ದೇ ತಡ ಮನೆ ಮೇಲಿಂದ ಜಿಗಿದು ಪರಾರಿಯಾಗಲು ಯತ್ನಿಸಿದ ಸಂದರ್ಭ ಮೂವರು ಕಳ್ಳರ ಪೈಕಿ ಓರ್ವ ಸಾವನಪ್ಪಿ, ಇಬ್ಬರು ಪರಾರಿಯಾಗಿರುವ ಘಟನೆ ದಾವಣಗೆರೆಯ ಕೆಟಿಜೆನಗರದಲ್ಲಿ ನಡೆದಿದೆ. ಸಾವನಪ್ಪಿರುವ ಕಳ್ಳನನ್ನು ದಾವಣಗೆರೆಯ ನಿವಾಸಿ ಪರಶುರಾಮ್ ಎಂದು ಗುರುತಿಸಲಾಗಿದೆ.
ಇಂದು ಬೆಳಗಿನ ಜಾವ 3 ಗಂಟೆಗೆ ಕೆಟಿಜೆನಗರದ ಮನೆಯೊಂದಕ್ಕೆ ಕಳ್ಳತನಕ್ಕಾಗಿ ಬಂದಿದ್ದ ಮೂವರು ಕಳ್ಳರು ಕಳ್ಳತನ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಮನೆ ಮಾಲೀಕ ಎಚ್ಚರಗೊಂಡಿದ್ದು, ಭಯಭೀತರಾದ ಮೂವರು ಕಳ್ಳರು ಪರಾರಿಯಾಗಲು ಮನೆಯ ಮಹಡಿ ಮೇಲಿಂದ ಜಿಗಿದಿದ್ದಾರೆ.