ಹರಿಹರ: ನಗರದ ಹಳೆ ಪಿ ಬಿ ರಸ್ತೆಯಲ್ಲಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್ ಮೇಲೆ ದಾಳಿ ನಡೆದಿದೆ. ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಅಬಕಾರಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲಿಸಿದರು.
ನಗರದ ಕೆಲವು ಮದ್ಯದ ಅಂಗಡಿಗಳಲ್ಲಿ ಅನಧಿಕೃತ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಜಿಲ್ಲಾಡಳಿತಕ್ಕೆ ದೂರು ಬರುತ್ತಿರುವ ಹಿನ್ನೆಲೆ, ಜಿಲ್ಲಾಧಿಕಾರಿ ಮಹಾಂತೇಶ ಬೀಳಿಗಿಯವರು ತಾಲೂಕು ಅಧಿಕಾರಿಗಳಿಗೆ ಕೂಡಲೇ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು. ಕೆಲವು ಮದ್ಯದ ಅಂಗಡಿಗಳಿಗೆ ಎರಡೆರಡು ಬಾಗಿಲು ಹೊಂದಿರುವ ಅನುಮಾನ ಬಂದಿದ್ದು, ರೆಸ್ಟೋರೆಂಟ್ ಮುಂಬಾಗಿಲು ಸೀಜ್ ಆಗಿದ್ದರೂ ಹಿಂಬಾಗಿಲಿನಿಂದ ಅಕ್ರಮವಾಗಿ ಮಾರಾಟ ಮಾಡಿರಬಹುದು ಎಂದು ಮದ್ಯದ ಅಂಗಡಿಯ ಮೇಲೆ ದಾಳಿ ನಡೆಸಲಾಗಿದೆ. ಪರಿಶೀಲಿಸಿದರು.