ದಾವಣಗೆರೆ: ಕೊರೊನಾ ಸೋಂಕಿತರಿಗೆ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ನಲ್ಲಿ ಇರುವವರಿಗೆ ಮತ್ತಷ್ಟು ಪೌಷ್ಟಿಕ ಆಹಾರ ಪೂರೈಸಲು ಜಿಲ್ಲಾಡಳಿತ ನಿರ್ಧರಿಸಿದೆ. ಇದಕ್ಕೆ ಆಯುಷ್ ಇಲಾಖೆಯೂ ಕೈ ಜೋಡಿಸಿದೆ.
ಮೈಸೂರು ಸಿಎಫ್ಟಿಆರ್ಐನಿಂದ ವಿಟಮಿನ್ ಮ್ಯಾಂಗೊ ಬಾರ್ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸ್ಪಿರುಲಿನಾ ಚಿಕ್ಕಿಗಳನ್ನು ತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ತಿಳಿಸಿದರು.