ಬೆಂಗಳೂರು: ಸೋಮವಾರ ಬಿಎಂಟಿಸಿ ಅಧ್ಯಕ್ಷ ಎನ್.ಎಸ್. ನಂದೀಶ್ ರೆಡ್ಡಿ ಕೆ ಆರ್ ಪುರಂನ ಐಟಿಐ ಬಳಿ ಇರುವ ಬಿಎಂಟಿಸಿ ಡಿಪೋ 24ಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದರು.
ಬಿಎಂಟಿಸಿ ಡಿಪೋಗೆ ನಂದೀಶ್ ರೆಡ್ಡಿ ಭೇಟಿ: ಅಧಿಕಾರಿಗಳಿಗೆ ತರಾಟೆ - ಬಿಎಂಟಿಸಿ ಡಿಪೋಗೆ ಭೇಟಿ ನೀಡಿದ ನಂದೀಶ್ ರೆಡ್ಡಿ
ಬಿಎಂಟಿಸಿ ಅಧ್ಯಕ್ಷ ಎನ್.ಎಸ್. ನಂದೀಶ್ ರೆಡ್ಡಿ ಅವರು ಕೆ ಆರ್ ಪುರಂನ ಐಟಿಐ ಬಳಿ ಇರುವ ಬಿಎಂಟಿಸಿ ಡಿಪೋ 24ಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದರು.
Nandish Reddy
ಡಿಪೋದ ಅವ್ಯವಸ್ಥೆ ಕಂಡು ಅಧಿಕಾರಿಗಳಿಗೆ ಚಳಿ ಬಿಡಿಸಿದರು. ಬಿಎಂಟಿಸಿಯ ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚನೆ ನೀಡಿದ್ರು. ಬಸ್ಗಳ ಸ್ವಚ್ಛತೆಗೆ ಆದ್ಯತೆ ನೀಡಿ, ನೌಕರರ ವಿಶ್ರಾಂತಿ ಕೊಠಡಿ, ಶೌಚಾಲಯ ಸ್ವಚ್ಛವಾಗಿರಬೇಕು, ಬಸ್ಗಳ ಸೀಟುಗಳು ಉತ್ತಮ ಸ್ಥಿತಿಯಲ್ಲಿರಬೇಕು, ಕೆಟ್ಟು ನಿಂತಿರುವ ಬಸ್ಗಳನ್ನು ಶೀಘ್ರವೇ ಸರಿಪಡಿಸಿ ಎಂದು ಅಧಿಕಾರಿಗಳಿಗೆ ನಂದೀಶ್ ರೆಡ್ಡಿ ತಾಕೀತು ಮಾಡಿದರು.