ದಾವಣಗೆರೆ: ವಿದ್ಯಾರ್ಥಿಯೋರ್ವ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ನಗರದ ಪಿಸಾಳೆ ಕಾಂಪೌಂಡ್ ಬಳಿ ನಡೆದಿದೆ. ಮಿಥುನ್ (18) ಅನುಮಾನಾಸ್ಪದವಾಗಿ ಸಾವನ್ನಪ್ಪಿದ ವಿದ್ಯಾರ್ಥಿ. ಈತ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಸತೀಶ್ ಪಿಸಾಳೆ ಎಂಬುವರ ಪುತ್ರ.
ದಾವಣಗೆರೆ: ಪಿಸಾಳೆ ಕಾಂಪೌಂಡಿನಲ್ಲಿ ಪಿಯುಸಿ ವಿದ್ಯಾರ್ಥಿ ನಿಗೂಢ ಸಾವು - PUC student death
ಮೃತ ಮಿಥುನ್ ಕತ್ತು ಕೈ , ಹೊಟ್ಟೆಯ ಭಾಗದಲ್ಲಿ ಚಾಕುವಿನಿಂದ ಇರಿದುಕೊಂಡಿರುವ ಗಾಯಗಳಿದ್ದು, ರಕ್ತದ ಮಡುವಿನಲ್ಲಿ ಮೃತದೇಹ ಪತ್ತೆಯಾಗಿದೆ. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಸಾವನ್ನಪ್ಪಿದ ವಿದ್ಯಾರ್ಥಿ ಮಿಥುನ್
ಇಂದು ಗಣಿತ ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿಯ ದೇಹ ಅನುಮಾನಾಸ್ಪದವಾಗಿ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಇದು ಕೊಲೆಯೋ, ಸಹಜ ಸಾವೋ ಎಂಬುದರ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮಿಥುನ್ ಕತ್ತು, ಕೈ ಹೊಟ್ಟೆಯ ಭಾಗದಲ್ಲಿ ಚಾಕುವಿನಿಂದ ಇರಿದುಕೊಂಡಿರುವ ಗಾಯಗಳಿವೆ. ಘಟನಾ ಸ್ಥಳಕ್ಕೆ ಶ್ವಾನದಳದೊಂದಿಗೆ ಬಡಾವಣೆ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಆಗಮಿಸಿ ಮಾಹಿತಿ ಕಲೆಹಾಕಿದರು.
ಇದನ್ನೂ ಓದಿ:ಕರ್ತವ್ಯನಿರತ ಮಹಿಳಾ ಎಸ್ಐಗೆ ಚಾಕುವಿನಿಂದ ಇರಿದ ವ್ಯಕ್ತಿ!