ದಾವಣಗೆರೆ: ನಾವು ಹಿಜಾಬ್ ಇಲ್ಲದೇ ಕಾಲೇಜ್ ಗೆ ಹೋಗಲ್ಲ ಎಂದು ಕಾಲೇಜಿಗೆ ರಜೆ ಇದ್ದರೂ ಇಲ್ಲಿನ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ನಗರದ ಪ್ರಥಮ ದರ್ಜೆ ಕಾಲೇಜು ಬಳಿ ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ. ಹೈಕೋರ್ಟ್ ತೀರ್ಪನ್ನು ಬೆನ್ನಲ್ಲೇ ನಾಲ್ವರು ವಿದ್ಯಾರ್ಥಿನಿಯರು ಪೋಸ್ಟರ್ ಹಿಡಿದುಕೊಂಡು ಕಾಲೇಜಿನ ಎದುರು ಪ್ರತಿಭಟಿಸಿದ್ದಾರೆ.
ಬೆಣ್ಣೆ ನಗರಿಯ ಸರ್ಕಾರಿ ಪದವಿ ಕಾಲೇಜಿನ ಎದುರು ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು ನಮಗೆ ಶಿಕ್ಷಣ ಎಷ್ಟು ಮುಖ್ಯವೋ, ನಮ್ಮ ಧರ್ಮವೂ ಅಷ್ಟೇ ಮುಖ್ಯ. ಆದ್ದರಿಂದ ನಾನು ಹಿಜಾಬ್ ತೆಗೆದು ಕಾಲೇಜಿಗೆ ಹೋಗಲ್ಲ ಎಂದು ಹಠ ಹಿಡಿದಿದ್ದಾರೆ.
ಹಿಜಾಬ್ ಇಲ್ಲದೇ ನಾವು ಕಾಲೇಜ್ ಗೆ ಹೋಗಲ್ಲ ಎಂದು ವಿದ್ಯಾರ್ಥಿನಿಯರಿಂದ ಪ್ರತಿಭಟನೆ... ಅಮಿತ್ ಶಾ ಮಧ್ಯಸ್ಥಿಕೆಗೆ ಒತ್ತಾಯ:ಈ ಹಿಂದೆ ಶಬರಿಮಲೆಯಲ್ಲಿ ಕೆಲ ವಿಚಾರ ಚರ್ಚೆಗೆ ಬಂದಿದ್ದವು. ಆಗ ಧಾರ್ಮಿಕ ವಿಚಾರಗಳಲ್ಲಿ ಕೋರ್ಟ್ ಪ್ರವೇಶ ಮಾಡಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು.ಇದೀಗ ಹಿಜಾಬ್ ವಿಚಾರದಲ್ಲೂ ಅಮಿತ್ ಶಾ ಅವರು ಮಧ್ಯ ಪ್ರವೇಶ ಮಾಡಿ ಬೆಂಬಲ ನೀಡಲಿ ಎಂದು ಒತ್ತಾಯಿಸಿದ್ದಾರೆ.
ಹೈಕೋರ್ಟ್ ತೀರ್ಪು ಬರುವ ತನಕ ಕಾಲೇಜ್ ನ ಮುಖ್ಯಸ್ಥರ ಮಾತು ಕೇಳಿ ಹಿಜಾಬ್ ತೆಗೆದು ಕೆಲ ಪರೀಕ್ಷೆಗಳಿಗೆ ಹಾಜರಾಗಿದ್ದೆವು. ನಮಗೆ ನ್ಯಾಯ ಸಿಗುವ ತನಕ ನಾವು ಹಿಜಾಬ್ ಇಲ್ಲದೇ ಕಾಲೇಜಿಗೆ ಹೋಗಲ್ಲ ಎಂದು ವಿದ್ಯಾರ್ಥಿನಿಯರು ಇದೇ ವೇಳೆ ತಿಳಿಸಿದ್ದಾರೆ.
ಓದಿ :ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಆಪ್ನ ಭಗವಂತ್ ಮಾನ್