ದಾವಣಗೆರೆ: ಕಾಂಗ್ರೆಸ್ನವರಿಗೆ ಬ್ಯಾಗ್ ಕೊಟ್ಟು ನೀವು ಮುಖ್ಯಮಂತ್ರಿ ಆಗಿರಬೇಕು ಎಂದು ಅರುಣ್ ಸಿಂಗ್ ಹಣ ತೆಗೆದುಕೊಂಡು ಹೋಗಲು ಕರ್ನಾಟಕಕ್ಕೆ ಬರ್ತಾರೆ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಶಾಸಕ ರೇಣುಕಾಚಾರ್ಯ ಟಾಂಗ್ ಕೊಟ್ಟರು.
ಕಾಂಗ್ರೆಸ್ನವರಿಗೆ ಬ್ಯಾಗ್ ಕೊಟ್ಟು ನೀವು ಮುಖ್ಯಮಂತ್ರಿ ಆಗಿರಬೇಕು: ಹೆಚ್ಡಿಕೆಗೆ ರೇಣುಕಾಚಾರ್ಯ ಟಾಂಗ್ - ಅರಣ್ ಸಿಂಗ್ ಕುರಿತು ಹೆಚ್ಡಿ ಕುಮಾರಸ್ವಾಮಿ ಹೇಳಿಕೆ
ಬ್ಯಾಗ್ ಕೊಡುವ ಸಂಸ್ಕೃತಿ ಬಿಜೆಪಿ ಪಕ್ಷದಲ್ಲಿಲ್ಲ. ನೀವು ಕಾಂಗ್ರೆಸ್ಗೆ ಬ್ಯಾಗ್ ಕೊಟ್ಟು ಮುಖ್ಯಮಂತ್ರಿಯಾಗಿದ್ದನ್ನು ಮರೆಯಬಾರದು ಎಂದು ಶಾಸಕ ರೇಣುಕಾಚಾರ್ಯ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ತಿರುಗೇಟು ನೀಡಿದರು.
ನಗರದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಹೆಚ್ಡಿಕೆ ಅವರು ಬಿಜೆಪಿ ಆಶೀರ್ವಾದದಿಂದ ಸಿಎಂ ಆಗಿದ್ದನ್ನು ಮರೆಯಬಾರದು. ಕಾಂಗ್ರೆಸ್ ಅವರ ಮುಂದೆ ಮಂಡಿ ಊರಿದ್ದಕ್ಕೆ ಮತ್ತೆ ಅಧಿಕಾರ ಕೊಟ್ರು. ಸಿಎಂ ಸ್ಥಾನ ಹೋಗಿದ್ದಕ್ಕೆ ಹತಾಶ ಭಾವನೆಯಿಂದ ಮಾತನಾಡ್ತಾರೆ. ನಮ್ಮ ಪಾರ್ಟಿಯಲ್ಲಿ ಹಣ ಕೊಡುವ ಸಂಸ್ಕ್ರತಿ ಇಲ್ಲ. ಅದು ನಿಮ್ಮ ಸಂಸ್ಕ್ರತಿ ಇರಬೇಕು ಎಂದರು.
2023ಕ್ಕೆ ಜೆಡಿಎಸ್ ಬಹುಮತ ಪಡೆಯುತ್ತದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಎಲ್ಲೂ ನಿಮ್ಮವರು ಇಲ್ಲ, ಮೈಸೂರಿನಲ್ಲಿ ಇದ್ದವರೂ ನಿಮ್ಮಿಂದ ದೂರ ಆಗ್ತಿದ್ದಾರೆ. ಇನ್ನೊಬ್ಬರನ್ನು ಟೀಕೆ ಮಾಡದೇ ಅಧಿಕಾರಕ್ಕೆ ಬರೋದು ಮುಖ್ಯ ಎಂದು ಹೇಳಿದರು.