ದಾವಣಗೆರೆ :ಹೊನ್ನಾಳಿ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಎಂ ಪಿ ರೇಣುಕಾಚಾರ್ಯ ಸದಾ ಕ್ಷೇತ್ರದ ಜನರ ಕಷ್ಟಗಳಿಗೆ ಸ್ಪಂದಿಸುತ್ತಾರೆ. ಮಾರ್ಗಮಧ್ಯೆ ಪಂಕ್ಚರ್ ಆಗಿದ್ದ ಆ್ಯಂಬುಲೆನ್ಸ್ ಟಯರ್ ಬದಲಿಸಲು ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಹೊನ್ನಾಳಿ ಕ್ಷೇತ್ರದ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ಹೊನ್ನಾಳಿ ನಗರದ ನ್ಯಾಮತಿ ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಆ್ಯಂಬುಲೆನ್ಸ್ಗೆ ಟೈಯರ್ ಬದಲಿಸಲು ನೆರವಾದರು. ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಜಿಲ್ಲೆಯ ನ್ಯಾಮತಿ ರಸ್ತೆ ಮಾರ್ಗವಾಗಿ ಶಾಸಕ ರೇಣುಕಾಚಾರ್ಯ ಆಗಮಿಸುತ್ತಿರುವ ವೇಳೆ ಅದೇ ಮಾರ್ಗದಲ್ಲಿ ಆ್ಯಂಬುಲೆನ್ಸ್ ಕೆಟ್ಟು ನಿಂತಿದ್ದನ್ನು ಗಮನಿಸಿದರು. ಕೂಡಲೇ ತಮ್ಮ ವಾಹನ ನಿಲ್ಲಿಸಿ, ಜಾಕ್ ನೀಡಿ ಖುದ್ದು ಸ್ಥಳದಲ್ಲಿ ನಿಂತು ರಿಪೇರಿಗೆ ಸಹಕರಿಸಿದರು.